ತಾಯಿ ಮಗಳ ಪ್ರೀತಿ ಮಮತೆಯ ಸಂಕೋಲೆಯಂತೆ ಅತ್ತೆ ಸೊಸೆಯ ಭಾಂದವ್ಯ ಬೆಸೆಯಲಿ: ಗಣೇಶ್.ಬಿ

ರಾಯಚೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ದೇವದುರ್ಗ ಇದರ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಖೇಣೇದ್ ಫಂಕ್ಷನ್ ಹಾಲ್ ನಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಶ್ರೀ ಬಸನಗೌಡ ದೇಸಾಯಿರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ಪ್ರಾದೇಶಿಕ ನಿರ್ದೇಶಕರಾದ ಬಿ.ಗಣೇಶ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಒಂದು ಕುಟುಂಬವು ಕೌಟುಂಬಿಕವಾಗಿ ಅಭಿವೃದ್ಧಿಯತ್ತ ಸಾಗಲು ಅತ್ತೆ ಸೊಸೆಯ ಭಾಂದವ್ಯ ಚೆನ್ನಾಗಿರಬೇಕು. ತಾಯಿಯಂತೆ ಪ್ರೀತಿ ಯಿಂದ ಅತ್ತೆಯನ್ನು ಗೌರವಿಸುವ ಸೊಸೆಯು, ಮಗಳಂತೆ ಸೊಸೆಯನ್ನು ಮಮತೆಯಿಂದ ಕಾಣುವ ಅತ್ತೆಯೂ ಇದ್ದಲ್ಲಿ ಸಂಸಾರದಲ್ಲಿ ಯಾವುದೇ ಬಿರುಕು ಮೂಡಲು ಸಾಧ್ಯವಿಲ್ಲ ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ ಎಂದು ಶುಭಹಾರೈಸಿದರು.

ಜನಮಂಗಳ ಕಾರ್ಯಕ್ರಮದಡಿಯಲ್ಲಿ ಸಲಕರಣೆಗಳ ವಿತರಣೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಭಾನುಪ್ರಕಾಶ್ ಖೇಣೆದ್ ರವರು ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಡಿ ತಾಲ್ಲೂಕಿನ ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದು, ಸಾಮಾನ್ಯ ಮನುಷ್ಯರಂತೆ ಅವರು ಕೂಡ ನಡೆದಾಡಬೇಕು ಎನ್ನುವುದು ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಶಯವಾಗಿದೆ. ಸಂಕಷ್ಟದಲ್ಲಿರುವ ಸಂತ್ರಸ್ಥರನ್ನು ಗುರುತಿಸಿ ಅವರ ಅವಶ್ಯಕತೆಗನುಗುಣವಾಗಿ ಸಲಕರಣೆಗಳನ್ನು ನೀಡಲಾಗುತ್ತಿದೆ. ವಿಕಲಚೇತನರಿಗೆ ಅನುಕಂಪ ಸೂಚಿಸುವ ಬದಲಿಗೆ ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಅವಕಾಶ ಕಲ್ಪಿಸಿದರೆ ವಿಕಲಚೇತನರು ಸಹ ಸ್ವಾಭಿಮಾನಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಜೊತೆಯಾಗಿ ಬಂದು ಜೊತೆ ಜೊತೆಯಲ್ಲಿ ಕುಳಿತು ಕಾರ್ಯಕ್ರಮ ಆಲಿಸಿದ ಅತ್ತೆ ಸೊಸೆಯಂದಿರನ್ನು ಗುರುತಿಸಿ ಗೌರವಿಸಲಾಯಿತು

ತಾಯಿಯ ಸಂಸ್ಕಾರ ಸಂಸ್ಕೃತಿ ಮಕ್ಕಳಿಗೆ ಆದರ್ಶ: ಶ್ರೀಮತಿ ಜ್ಯೋತಿಲತಾ

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಜ್ಯೋತಿಲತಾ ಉಪನ್ಯಾಸಕರು ಸ.ಪಿ.ಯು.ಕಾಲೇಜು ಗಲಗ ಭಾಗವಹಿಸಿ ವಿಚಾರಗೋಷ್ಠಿ ಮಂಡಿಸುತ್ತಾ ಈ ಜಗತ್ತಿನ ಸೃಷ್ಟಿಯಲ್ಲಿ ಮಾನವನ ಸೃಷ್ಟಿಯು ಬಹಳ ಶ್ರೇಷ್ಟವಾದುದು. ಮಾನವ ಕುಲದ ವಿಕಾಸವಾದಂತೆ ಕಾಲಕ್ರಮೇಣ ನಾಗರಿಕತೆ ಬೆಳೆಯಿತು. ಮಾನವ ಅನ್ಯನ್ಯ ಕಾರಣಗಳಿಗಾಗಿ ತಂಡ ತಂಡವಾಗಿ ಬದುಕಲು ಆರಂಭಿಸಿದ. ವಿಭಿನ್ನ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿರುವ ಜಗತ್ತಿನಲ್ಲಿ ಮಾನವರು ಅವರವರು ಬದುಕುವ ನೆಲ ಜಲದ ಗುಣಗಳಿಗೆ ಅನುಗುಣವಾಗಿ ಬದುಕಬೇಕಾಯಿತು. ಇದರಿಂದ ವಿಭಿನ್ನ ಜೀವನ ರೀತಿ ಬೆಳೆಯಿತು. ಒಂದು ಪ್ರದೇಶದಲ್ಲಿ ಒಟ್ಟಿಗೆ ಬದುಕುವ ಜನರ ರೀತಿ, ನೀತಿಗಳು ವಿಶಿಷ್ಟವಾಗಿ ಆ ಪ್ರದೇಶಕ್ಕೆ ಹೊಂದಿಕೊಂಡು ಬದುಕುವ ರೀತಿ ಒಂದು ಸಂಸ್ಕೃತಿ ಎಂದಾಯಿತು. ಈ ಸಂಸ್ಕೃತಿಯೊಳಗೆ ಬದುಕುವರೇ ಪೂರಕ ರೀತಿ, ನೀತಿಗಳನ್ನು ಕಟ್ಟು ಕಟ್ಟಳೆಗಳನ್ನು ಜನರು ಬೆಳೆಸಿ ಕೊಂಡರು. ಇವುಗಳು ಸಂಸ್ಕಾರವೆಂದು ಗುರುತಿಸಲ್ಪಟ್ಟವು. ಹಾಗೆ ಈ ಸಂಸ್ಕಾರವೆಂಬುದು ಜನರ ಬದುಕು, ಅವರ ನಂಬಿಕೆ, ಆರಾಧನೆ, ಆಹಾರ ಪದ್ಧತಿ, ನಡವಳಿಕೆ, ಆಚಾರ- ವಿಚಾರ, ವ್ಯವಹಾರಗಳನ್ನು ಪ್ರತಿಬಿಂಭಿಸುತ್ತದೆ. ಹೀಗೆ ಈ ಭೂಮಿಯ ಮೇಲೆ ಅನೇಕ ಸಂಸ್ಕೃತಿ, ಸಂಸ್ಕಾರಗಳು ಹುಟ್ಟಿಕೊಂಡವು. ಗ್ರೀಕ್ ಸಂಸ್ಕೃತಿ, ಪಾಶ್ಚಾತ್ಯ ಸಂಸ್ಕೃತಿಯಂತೆ ಹಿಂದೂ ಸಂಸ್ಕೃತಿಯು ಹುಟ್ಟಿ ಕೊಂಡಿತು. ಸಿಂಧೂನದಿ ಹರಿಯುವ ಇಕ್ಕೆಲ ತೀರದಲ್ಲಿ ಹುಟ್ಟಿ ಬೆಳೆದುದು ಹಿಂದೂ ಸಂಸ್ಕೃತಿ.

ಈ ಭೂಮಿಯ ಮೇಲಣ ಜನರ ಬದುಕು ಅಂದಿನಿಂದ ಇಂದಿಗೂ ವಿಭಿನ್ನ ರೀತಿಯದಾಗಿದೆ. ಒಂದೆಡೆ ವೈಜ್ಞಾನಿಕ ಬೆಳವಣಿಗೆಯೊಂದಿಗೆ ಆರ್ಥಿಕ ಬೆಳವಣಿಗೆಯಾಗಿ ನಾಗರಿಕ ಸಂಸ್ಕೃತಿಯ ಜನರು ಸಮೃದ್ಧಿಯ ಬದುಕು ಬದುಕಿದರೆ ಅಂದಿನಿಂದ ಇಂದಿಗೂ ಗುಡ್ಡಕಾಡು, ಅರಣ್ಯ ಬೆಟ್ಟಗಳಲ್ಲಿ ವಾಸಿಸುವ ಜನರು ಕಷ್ಟಕರ ಬದುಕು ನಡೆಸುತ್ತಿದ್ದಾರೆ. ನಾಗರಿಕ ಬದುಕಿನ ಸಂಸ್ಕೃತಿ, ಸಂಸ್ಕಾರಗಳೇ ಬೇರೆಯಾಗಿ, ಈ ಗುಡ್ಡ ಕಾಡಿನಲ್ಲಿ ಬದುಕುವ ಜನರ ಸಂಸ್ಕಾರಗಳೇ ಬೇರೆ ಇರುತ್ತವೆ. ಅಂದರೆ ಒಂದು ವರ್ಗದ, ಪ್ರದೇಶದ ಜನರ ಸಂಸ್ಕಾರದಿಂದ ಆ ಜನರ ಬದುಕನ್ನು ಅರ್ಥೈಸಿಕೊಳ್ಳಬಹುದು. ಹೊಲದಲ್ಲಿ ಬರುವ ಫಸಲೇ ಬೆಳೆಯ ಸಮರ್ಪಕತೆಗೆ ಅಳತೆಗೋಲು ಇದ್ದಂತೆ, ಈ ಸಂಸ್ಕಾರದಿಂದ ಜನರ ಬದುಕನ್ನು ಕಲ್ಪಿಸಬಹುದಾಗಿದೆ.

ಈ ಎಲ್ಲಾ ಸಂಸ್ಕೃತಿ ಈ ಜಗತ್ತಿನಲ್ಲಿ ಯಾವಾಗ ಹುಟ್ಟಿಕೊಂಡವು ಎನ್ನುವುದು ನಿಖರವಾಗಿಲ್ಲವಾದರೂ ಇವು ತಮ್ಮದೇ ಆದ ನಂಬಿಕೆ, ಸಂಸ್ಕಾರಗಳನ್ನು ದಿನ ಕಳೆದಂತೆ, ಕಾಲ ಬದಲಾದಂತೆ ಹುಟ್ಟು ಹಾಕಿತು. ಅದರಂತೆ ಭಾರತೀಯ ಸಂಸ್ಕೃತಿಯೂ ಬೆಳೆದು ಪ್ರೀತಿ, ತಾಳ್ಮೆ ಕ್ಷಮೆ, ನಿಸ್ವಾರ್ಥತೆಯಂತಹ ಸಾತ್ವಿಕ ಗುಣಗಳನ್ನು ಪ್ರತಿಬಿಂಬಿಸಿತು. ಅಂದರೆ ವಿಶ್ವದ ಜನರೆಲ್ಲ ದೇವರು, ಧರ್ಮದ ಬಗ್ಗೆ ಯೋಚಿಸಲೂ ಆಗದ ಸುಮಾರು 5000 ವರ್ಷಗಳ ಹಿಂದೆಯೇ ಉತ್ಕೃಷ್ಟ ನವ ನಾಗರಿಕತೆ ಭಾರತದಲ್ಲಿ ಕಂಗೊಳಿಸುತ್ತಿತ್ತು. ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಯು ಬೇರು ಬಿಟ್ಟು ಇಡೀ ಜಗತ್ತಿಗೆ ಮಾನವೀಯತೆ ಮತ್ತು ನಾಗರಿಕತೆಯನ್ನು ನೀಡಿದೆ. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ, ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವೆಂಬುದು ವಿವಿಧತೆಯಲ್ಲಿ ಏಕತೆಯನ್ನು ಕಂಡಿದೆ. ಯಾವ ಪ್ರಾಣಿ ಪಕ್ಷಿಗೂ ಇರದ ಅಮೂಲ ಚೈತನ ಬುದಿ, ಮಾತು ಮಾನವನಿಗೆ ಇದೆ.
ನಮ್ಮ ಸಂಸ್ಕೃತಿ ಸಂಸ್ಕಾರಗಳಲ್ಲಿ ‘ಸರ್ವೇ ಜನಾ ಸುಖಿನೋಭವಂತು’ ಎನ್ನುವ ಚಿಂತನೆ ಇದೆ. ಜಗದ ಸುಖದಲ್ಲಿ ನನ್ನ ಸುಖವಿದೆ ಎನ್ನುವ ನೀತಿಯಿದೆ. ನೂರಾರು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಪರಂಪರೆ ಇರುವ ದೇಶವಾದರೂ ಇಲ್ಲಿ ನೀನು ಸ್ವಾರ್ಥಿಯಾಗಿ ನಿನ್ನೊಬ್ಬನನ್ನೇ ನೋಡಬೇಡ, ನಾಲ್ಕು ಜನರಿಗೆ ಉಪಕಾರಿಯಾಗಿ ಬದುಕು, ಯಾರು ಬೇರೆಯವರಿಗಾಗಿ ಬದುಕುತ್ತಾರೋ ಅವರೇ ನಿಜವಾಗಿ ಬದುಕುವವರು ಎನ್ನುವ ಉದಾತ್ತ ಸಾಂಸ್ಕೃತಿಕ ಬೇರುಗಳೇ ನಮ್ಮ ರಾಷ್ಟ್ರೀಯತೆಯಲ್ಲಡಗಿದೆ. ಒಳ್ಳೆಯ ಹಾದಿಯಲ್ಲಿ ನಡೆಯಬೇಕೆಂಬ ಕನಸನ್ನು ಹೊಂದಿರುವವರನ್ನು ಈ ಪ್ರಕೃತಿಯು ಎಂದೂ ಕೈಬಿಡುವುದಿಲ್ಲ ಎಂಬ ನಂಬಿಕೆ ನಮ್ಮ ಪ್ರಕೃತಿಯ ಆರಾಧನೆಯಲ್ಲಿದೆ. ಹಿಂದೆ ನಮ್ಮ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಜನರಲ್ಲಿ ನಂಬಿಕೆ, ಭಯ, ಭಕ್ತಿ ಇತ್ತು. ಯಾವುದೇ ಕಾರಣಕ್ಕೂ ನಮ್ಮ ಸಂಸ್ಕಾರಗಳಿಂದ ವಿಚಲಿತರಾಗುತ್ತಿರಲಿಲ್ಲ. ವಿನಯದಿಂದ ಅದಮ್ಯವಾದ ಆತ್ಮವಿಶ್ವಾಸವಿದ್ದು ದೇವರು, ಜಗತ್ತು ಮತ್ತು ಆಧ್ಯಾತ್ಮಗಳಿಗೆ ಹೊಸ ಹೊಸ ಅರ್ಥಗಳನ್ನು ಕೊಡುತ್ತ ಧರ್ಮದ ಅಡಿಪಾಯವನ್ನು ಗಟ್ಟಿಗೊಳಿಸುವ ತ್ಯಾಗ, ಬಲಿದಾನದ ಪರಂಪರೆ ನಮ್ಮಲ್ಲಿದೆ.

ವಿಮಾ ಕಾರ್ಯಕ್ರಮದಡಿಯಲ್ಲಿ ಸಹಾಯಧನ ವಿತರಣೆ : ಸುಮಾರು 170ಕ್ಕೂ‌ ಹೆಚ್ಚು ಫಲಾನುಭವಿಗಳಿಗೆ 25ಲಕ್ಷಕ್ಕೂ ಅಧಿಕ ಸೌಲಭ್ಯದ ಒದಗಣೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಸಲ್ಪಡುವ ವಿಮಾ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಗೆ ವೈದ್ಯಕೀಯ ನೆರವು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ರಕ್ಷಾ ಕಾರ್ಯಕ್ರಮ ಜಾರಿಯಲ್ಲಿದ್ದು ಈ ಕಾರ್ಯಕ್ರಮದಲ್ಲಿ ನೋಂದಣಿಯಾದ ಸದಸ್ಯರಿಗೆ ತೀವ್ರ ತರದ ಕಾಯಿಲೆಗಳು ಬಂದಾಗ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಇದ್ದು ಇದಕ್ಕಾಗಿ ಮಂಜೂರಾದ 20,000/- ಮೊತ್ತ ವನ್ನು ಮಲ್ಲಮ್ಮ ದೇವದುರ್ಗ ರವರಿಗೆ ನೀಡಲಾಯಿತು ತಾಲೂಕಿನಲ್ಲಿ ಪ್ರಸ್ತುತ ವರ್ಷದಲ್ಲಿ 170ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಸುಮಾರು 25ಲಕ್ಷಕ್ಕೂ ಅಧಿಕ ಮೊತ್ತದ ವಿಮಾ ಸೌಲಭ್ಯ ಒದಗಿಸಲಾಗಿದೆ

ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ನಿರ್ದೇಶಕರಾದ ಸಂತೋಷ್ ಕುಮಾರ್, ಭಾನು ಪ್ರಕಾಶ್ ಖೇಣೇದ್ ಜಿ.ಜ.ಜಾ.ವೇದಿಕೆ ಸದಸ್ಯರು, ಸುಭಾಶ್ ಪಾಟೀಲ್ ಜಿ.ಜ.ಜಾ.ವೇದಿಕೆ ಸದಸ್ಯರು, ಮಾಜಿ ಸೈನಿಕರಾದ ಪಂಪಣ್ಣ ಅಕ್ಕರಕಿ, ಡಾ.ಲೀಲಾವತಿ ದೇವದುರ್ಗ, ಆರಕ್ಷಕ ಠಾಣೆಯ PSI ಉಮೇಶ ಭಾನು, ಡಾ.ನಿರ್ಮಲ ಕೆಳಮಣಿ ಕಲ್ಬುರ್ಗಿ, ತಾಲೂಕಿನ ಯೋಜನಾಧಿಕಾರಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು, ಸೇವಾ ಪ್ರತಿನಿಧಿ ಯವರು ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.

ಜ್ಞಾನ ವಿಕಾಸ ಸದಸ್ಯರುಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 86 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 49 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 53 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 136 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 75 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ

    • By admin
    • December 10, 2024
    • 86 views
    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ