ಸೈನಿಕರಿಗೆ ‘ಸೇವಾ ಸಿಂಧು’ ನೋಂದಣಿಗೆ ವಿಶೇಷ ಅವಕಾಶ ನೀಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಂದ ಸಿಎಂಗೆ ಮನವಿ

.
ಬೆಳ್ತಂಗಡಿ: ಸದಾ ಕ್ರಿಯಾಶೀಲವಾಗಿ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರವರು ದೇಶ ಸೇವಕರ ಪರ ಧ್ವನಿಯಾಗಿದ್ದಾರೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಸೈನಿಕರಿಗೆ ಹೆಸರು ನೋಂದಾಯಿಸಲು ವಿಶೇಷ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಹರೀಶ್ ಪೂಂಜ ಮನವಿ ಮಾಡಿದರು.

ದೇಶದ ವಿವಿಧ ಭಾಗಗಳಲ್ಲಿ ರಕ್ಷಣೆಯ ಮಾಡುತ್ತಿರುವ ಸೈನಿಕರು ತಮ್ಮ ವಾರ್ಷಿಕ ರಜೆಯ ನಿಮಿತ್ತ ತಮ್ಮ ಊರುಗಳಿಗೆ ಮರಳುವುದು ಸಾಮಾನ್ಯ. ಕೋವಿಡ್-19 ಸೋಂಕಿನ ಕಾರಣದಿಂದ ಹೊರ ರಾಜ್ಯಗಳಿಂದ ಬರುವವರಿಗೆ ಹಲವು ಅಡಚಣೆಗಳು ಎದುರಾಗುತ್ತಿವೆ. ಸೈನಿಕರಿಗೆ ತಮ್ಮ ಕುಟುಂಬಗಳನ್ನು ಸೇರಿಕೊಳ್ಳಲು ವಿಶೇಷ ಅನುಮತಿ ನೀಡಬೇಕು ಎಂದು ಕೋರಿದರು.ರಾಜ್ಯದ ಸೇವಾ ಸಿಂಧು ಪೋರ್ಟಲ್​ನಲ್ಲಿ ಸೈನಿಕರು ತಮ್ಮ ಹೆಸರು ನೋಂದಾಯಿಸಲು ವಿಶೇಷ ಅವಕಾಶ ನೀಡಬೇಕು. ಅವರಿಗೆ ತಕ್ಷಣ ಪ್ರಯಾಣ ಬೆಳೆಸಲು ಅನುವು ಮಾಡಿಕೊಡಬೇಕಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದಾರೆ.

READ ALSO