TRENDING
Next
Prev

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ ಗಣೇಶ್ ಶಿರ್ಲಾಲು, ಜತೆ ಕಾರ್ಯದರ್ಶಿಯಾಗಿ ವಿಜಯವಾಣಿ ವರದಿಗಾರ ಮನೋಹರ ಬಳಂಜ, ಕೋಶಾಧಿಕಾರಿಯಾಗಿ ಸಂಯುಕ್ತ ಕರ್ನಾಟಕದ ವರದಿಗಾರ ಪುಷ್ಪರಾಜ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

READ ALSO


ಪ್ರಜಾವಾಣಿ ಹಿರಿಯ ವರದಿಗಾರ ಆರ್.ಎನ್.ಪೂವಣಿ ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ನೂತನ ಸದಸ್ಯರಿಗೆ ನಿರ್ಣಯ ಪುಸ್ತಕ ನೀಡಿ ಶುಭ ಹಾರೈಸಿದರು.

ಸದಸ್ಯರಾದ ಬಿ.ಎಸ್.ಕುಲಾಲ್, ದೇವಿಪ್ರಸಾದ್, ಶ್ರೀನಿವಾಸ ತಂತ್ರಿ, ಮಂಜುನಾಥ ರೈ, ದೀಪಕ ಆಠವಳೆ, ಅಚುಶ್ರೀ ಬಾಂಗೇರು, ಜಾರಪ್ಪ ಪೂಜಾರಿ, ಹೃಷಿಕೇಶ್ ಧರ್ಮಸ್ಥಳ, ಪ್ರಸಾದ ಶೆಟ್ಟಿ ಏಣಿಂಜೆ, ಸಂತೋಷ್ ಕೋಟ್ಯಾನ್, ತುಕಾರಾಮ, ಅರವಿಂದ ಹೆಬ್ಬಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿ ಅನುಮೋದಿಸಲಾಯಿತು.