TRENDING
Next
Prev

ರಾಜ್ಯದಾದ್ಯಂತ ಶಾಲಾ ಕಛೇರಿಗಳು ಜೂನ್ 05ರಿಂದ ಪುನರಾರಂಭ!

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶನದಂತೆ ಕೇಂದ್ರದ ಮಾರ್ಗಸೂಚಿಯ ಆಧಾರದಲ್ಲಿ ಜುಲೈ 1 ರಿಂದ ಹಂತಹಂತವಾಗಿ ಶಾಲೆಗಳನ್ನು ತೆರೆಯಲು ಪೋಷಕರ ಅಭಿಪ್ರಾಯ ಸಂಗ್ರಹಕ್ಕಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

5.6.2020 ರಿಂದಲೇ ರಾಜ್ಯದ ಎಲ್ಲ ಸರ್ಕಾರಿ‌ ಶಾಲೆಗಳು ಅಲ್ಲಿನ ಕಛೇರಿ ಸಿಬ್ಬಂದಿ ಸಂಬಂಧಿಸಿದ ಶಾಲೆಗಳಲ್ಲಿ ಕರ್ತವ್ಯಕ್ಕೆ‌ ಹಾಜರಾಗಿ, 8.6.2020ರಿಂದ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಿದ್ದಾರೆ. ಶೈಕ್ಷಣಿಕ ತಯಾರಿಗೆ ಜೂನ್‌ ಮಾಹೆಯನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳ ಪರಿಸ್ಥಿತಿಯ ಆಧಾರದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸರ್ಕಾರದ ಕಾಲಕಾಲಿಕ ನಿರ್ದೇಶನದಂತೆ ಕ್ರಮ ವಹಿಸಲು ಸೂಚಿಸಿದ್ದಾರೆ. 8.6.2020ರಿಂದ ಖಾಸಗಿ ಅನುದಾನರಹಿತ ಶಾಲಾ ಕಛೇರಿಗಳ ಪ್ರಾರಂಭಕ್ಕೂ ಅನುಮತಿಸಿ ಆದೇಶ ಹೊರಡಿಸಲಾಗಿದ್ದು, ಪೋಷಕರ‌ ಅಭಿಪ್ರಾಯವನ್ನು 15.06.2020ರ ಒಳಗೆ SATS ನಲ್ಲಿ‌ದಾಖಲಿಸಲು ಸೂಚಿಸಲಾಗಿದೆ.

READ ALSO