
ಬೆಳ್ತಂಗಡಿ: ಕೊರೊನ ಜಾಗೃತಿ ಹಾಗೂ ಶುಚಿತ್ವ ಕಾಪಾಡಲು ಗ್ರಾಮ ಪಂಚಾಯತ್ ಕೊಯ್ಯೂರಿಗೆ ಸ್ಯಾನಿಟೈಸರ್ ಯಂತ್ರವನ್ನು ನೀಡಲಾಯಿತು. ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ನಿಯೋಜಿತ ಕೋಶಾಧಿಕಾರಿ ಅನಂತ ಕೃಷ್ಣ ಸ್ಯಾನಿಟೈಸರ್ ಯಂತ್ರವನ್ನು ಪಂಚಾಯತ್ ಅಧ್ಯಕ್ಷೆ ಶಶಿಕಲಾ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೀವಿ ರೈಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೊಯ್ಯೂರು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.