ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ಸಹಕಾರ ಸಚಿವರ ಸೂಚನೆ !

ಬೆಂಗಳೂರು : ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆಶಾ ಕಾರ್ಯಕರ್ತೆಯರಿಗಾಗಿ ಜಿಲ್ಲಾವಾರು ಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೂಚಿಸಿದ್ದಾರೆ.

ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಅವರಿಗೆ ಪ್ರೋತ್ಸಾಹ ನೀಡಲು 3 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗಿದೆ. ಇದರ ಜೊತೆಗೆ ಅವರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುವಂತೆ ಜಿಲ್ಲಾವಾರು ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಇಲಾಖೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸಹಕಾರ ಇಲಾಖೆಯ ರಿಜಿಸ್ಟಾರ್ ಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 40,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ಗುರುತಿಸಿ, ಅವರಿಗೆ ನೈತಿಕವಾಗಿ ಆತ್ಮಸ್ಥೈರ್ಯ ತುಂಬಲು ಹಾಗೂ ಆರ್ಥಿಕ ಸದೃಢತೆ ಹೊಂದಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವ ಸಲುವಾಗಿ, ಆಯಾ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ, ಈ ಬಗ್ಗೆ ಅರಿವು ಮೂಡಿಸಿ, ಅವರುಗಳಿಗೆ ಆರ್ಥಿಕವಾಗಿ ಸಬಲತೆ ಹೊಂದಲು, ಪ್ರತಿ ಜಿಲ್ಲೆಯಲ್ಲಿಯೂ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ಸಂಬಂಧಪಟ್ಟ ಪ್ರಾಂತೀಯ ಜಂಟಿ ನಿಬಂಧಕರು, ಉಪನಿಬಂಧಕರು ಹಾಗೂ ಸಹಾಯಕ ನಿಬಂಧಕರುಗಳಿಗೆ ನಿರ್ದೇಶನ ನೀಡಿ, ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ಕೈಗೊಂಡಕ್ರಮದ ಬಗ್ಗೆ 15 ದಿನಗಳೊಳಗಾಗಿ ಈ ಕಛೇರಿಗೆ ವರದಿ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

Spread the love
  • Related Posts

    ಸೇವಾಧಾಮದಲ್ಲಿ ನಿಯೋ ಮೋಷನ್ ವಿಥ್ ಕಾರ್ಟ್ ನ ವಿತರಣೆ ಮತ್ತು ಸೇವಾಧಾಮ ಸಂಸ್ಥಾಪಕರ ಹುಟ್ಟುಹಬ್ಬ ಆಚರಣೆ

    ಸೌತಡ್ಕ(ಜುಲೈ. 29) : ಸೆಲ್ಕೊ ಫೌಂಡೇಶನ್, ಬೆಂಗಳೂರು ಮತ್ತು ನಿಯೋ ಮೋಶನ್ ಅಸಿಸ್ಟಿವ್‌ ಡಿವೈಸ್‌ ಇವುಗಳ ಆಶ್ರಯದಲ್ಲಿ ಸೇವಾಭಾರತಿ(ರಿ.),ಕನ್ಯಾಡಿ ಇದರ ಸಹಕಾರದಲ್ಲಿ ಚಕ್ರದ ಮೇಲೆ ಜೀವನೋಪಾಯ ನಿಯೋ ಬೋಲ್ಟ್ ವಿತರಣೆ ಮತ್ತು ಸೇವಾಭಾರತಿಯ ಖಜಾಂಚಿ ಮತ್ತು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ.…

    Spread the love

    ಚಾರ್ಮಾಡಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ರಚನೆ, ಅಧ್ಯಕ್ಷರಾಗಿ ಶ್ರೀನಿವಾಸ್ ಕುಲಾಲ್ ಆಯ್ಕೆ

    ಚಾರ್ಮಾಡಿ : ಚಾರ್ಮಾಡಿ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಇದರ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ನಾರಾಯಣ ರಾವ್ ಮಠತಮಜಲು, ಅಧ್ಯಕ್ಷರಾಗಿ ಶ್ರೀನಿವಾಸ್ ಕುಲಾಲ್, ಕಾರ್ಯದರ್ಶಿಯಾಗಿ ಗಣೇಶ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಯಶೋಧರ…

    Spread the love

    You Missed

    ಸೇವಾಧಾಮದಲ್ಲಿ ನಿಯೋ ಮೋಷನ್ ವಿಥ್ ಕಾರ್ಟ್ ನ ವಿತರಣೆ ಮತ್ತು ಸೇವಾಧಾಮ ಸಂಸ್ಥಾಪಕರ ಹುಟ್ಟುಹಬ್ಬ ಆಚರಣೆ

    • By admin
    • July 30, 2025
    • 21 views
    ಸೇವಾಧಾಮದಲ್ಲಿ ನಿಯೋ ಮೋಷನ್  ವಿಥ್ ಕಾರ್ಟ್ ನ ವಿತರಣೆ ಮತ್ತು ಸೇವಾಧಾಮ ಸಂಸ್ಥಾಪಕರ ಹುಟ್ಟುಹಬ್ಬ ಆಚರಣೆ

    ಚಾರ್ಮಾಡಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ರಚನೆ, ಅಧ್ಯಕ್ಷರಾಗಿ ಶ್ರೀನಿವಾಸ್ ಕುಲಾಲ್ ಆಯ್ಕೆ

    • By admin
    • July 29, 2025
    • 66 views
    ಚಾರ್ಮಾಡಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ರಚನೆ, ಅಧ್ಯಕ್ಷರಾಗಿ ಶ್ರೀನಿವಾಸ್ ಕುಲಾಲ್ ಆಯ್ಕೆ

    ಉಜಿರೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ “ಮಹಿಳಾ ಯಕ್ಷ ಸಂಭ್ರಮ”

    • By admin
    • July 28, 2025
    • 102 views
    ಉಜಿರೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ “ಮಹಿಳಾ ಯಕ್ಷ ಸಂಭ್ರಮ”

    ಧರ್ಮಸ್ಥಳ ಸಮೀಪದ ಬೊಳಿಯಾರ್ ಬಳಿ ಒಂಟಿ ಸಲಗ ಪ್ರತ್ಯಕ್ಷ ಅಂಗಡಿಯೊಳಗೆ ನುಗ್ಗಿ ಪಾರಾದ ಮಕ್ಕಳು

    • By admin
    • July 28, 2025
    • 156 views
    ಧರ್ಮಸ್ಥಳ ಸಮೀಪದ ಬೊಳಿಯಾರ್ ಬಳಿ ಒಂಟಿ ಸಲಗ ಪ್ರತ್ಯಕ್ಷ ಅಂಗಡಿಯೊಳಗೆ ನುಗ್ಗಿ ಪಾರಾದ ಮಕ್ಕಳು

    ಹೆಗ್ಗಡೆಯವರೇ, ಸಿಹಿ ಹಣ್ಣಿನ ಮರಕ್ಕೆ ಕಲ್ಲೇಟುಗಳು ಸಹಜ, ಟೀಕೆಗಳಿಗೆ ಬೆದರದೆ ಮುಂದುವರಿಯಿರಿ: ವಿಶ್ವೇಶ್ವರ ಭಟ್‌

    • By admin
    • July 27, 2025
    • 93 views
    ಹೆಗ್ಗಡೆಯವರೇ, ಸಿಹಿ ಹಣ್ಣಿನ ಮರಕ್ಕೆ ಕಲ್ಲೇಟುಗಳು ಸಹಜ, ಟೀಕೆಗಳಿಗೆ ಬೆದರದೆ ಮುಂದುವರಿಯಿರಿ: ವಿಶ್ವೇಶ್ವರ ಭಟ್‌

    ಕನ್ಯಾಡಿಯಲ್ಲಿ ಧರೆಗುರುಳಿದ ಮರ ರಸ್ತೆ ಸಂಚಾರದಲ್ಲಿ ವ್ಯತ್ಯಯ, ವಿದ್ಯುತ್ ಸಂಪರ್ಕದಲ್ಲಿ ಅಡಚಣೆ, ಸಾರ್ವಜನಿಕರಿಂದ ಮುಂದುವರಿದ ತೆರವು ಕಾರ್ಯ

    • By admin
    • July 26, 2025
    • 89 views
    ಕನ್ಯಾಡಿಯಲ್ಲಿ ಧರೆಗುರುಳಿದ ಮರ ರಸ್ತೆ ಸಂಚಾರದಲ್ಲಿ ವ್ಯತ್ಯಯ, ವಿದ್ಯುತ್ ಸಂಪರ್ಕದಲ್ಲಿ ಅಡಚಣೆ, ಸಾರ್ವಜನಿಕರಿಂದ ಮುಂದುವರಿದ ತೆರವು ಕಾರ್ಯ