ಚೆನೈ: ಕೊರೋನಾಗೆ ದೇಶದಲ್ಲಿ ಮೊದಲ ಜನಪ್ರತಿನಿಧಿ ಬಲಿಯಾಗಿದ್ದು ತಮಿಳುನಾಡಿನ ಚೆನೈನ ತಿರುವಳ್ಳಿಯ 62 ವರ್ಷದ ಡಿ.ಎಂ.ಕೆ ಶಾಸಕ ಅನ್ಬಳಗನ್ ರವರು ಹುಟ್ಟುಹಬ್ಬದ ದಿನದಂದೆ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ಉಸಿರಾಟ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಜೂನ್ 2ರಂದು ಸೋಂಕು ದೃಢಪಟ್ಟಿದ್ದು ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮಿಳು ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಇವರು ನಿರ್ಮಾಪಕ ಹಾಗೂ ವಿತರಕರಾಗಿದ್ದರು.