ಕೊನೆಗೂ ಕಾಡುಕೋಣ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳ ಯಶಸ್ವಿ ಕಾರ್ಯಾಚರಣೆ

ಮಂಗಳೂರು: ಇಂದು ಬೆಳ್ಳಂ ಬೆಳಗ್ಗೆ ಮಂಗಳೂರು ನಗರದ ಮುಖ್ಯ ರಸ್ತೆಯಲ್ಲೇ ತಿರುಗಾಡುತ್ತಿದ್ದ ಕಾಡುಕೋಣವನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ವಿಶಾಲ್ ನರ್ಸಿಂಗ್ ಹೋಂ, ಗುಜರಾತಿ ಶಾಲೆ ಬಳಿ ಪ್ರತ್ಯಕ್ಷವಾಗಿದ್ದ ಕಾಡುಕೋಣ ಬಳಿಕ ಪಬ್ಬಾಸ್, ಬಿಜೈ ರೋಡಿನಲ್ಲಿ ಓಡಾಡ್ತ ಇತ್ತು. ಅರಣ್ಯ ಅಧಿಕಾರಿಗಳು, ಪೊಲೀಸರು ಬೆಳಗ್ಗಿನಿಂದಲೇ ಕಾಡುಕೋಣವನ್ನ ಹಿಡಿಯಲು ಪ್ರಯತ್ನಿಸುತ್ತಿದ್ರು. ಅಲ್ಲದೆ ನಗರದ ಜನತೆ ಕೂಡ ಕಾಡುಕೋಣವನ್ನ ಕಂಡು ಭಯಭೀತರಾಗಿದ್ರು.

READ ALSO

ಕೊನೆಗೆ ವೇರ್ ಹೌಸ್ ರೋಡ್ ನ ತೃಪ್ತಿ ಅಪಾರ್ಟ್ ಮೆಂಟ್ ಬಳಿ ಕಾಡುಕೋಣವನ್ನ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಡುಕೋಣವನ್ನು ಪಿಲಿಕುಳಕ್ಕೆ ರವಾನಿಸಲಾಗಿದೆ.