ಮಂಗಳೂರು: ಮಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ಇಂದು ನಗರದ ಬೋಳೂರು ಪರಿಸರದ 58 ವರ್ಷದ ಮಹಿಳೆಗೆ ಕೊರೊನ ಪಾಸಿಟಿವ್ ದೃಢಪಟ್ಟಿದೆ. ಇವರಿಗೆ ರೋಗಿ ಸಂಖ್ಯೆ- P501 ರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಪರೀಕ್ಷೆಯಲ್ಲಿ ಕಂಡು ಬಂದಿದೆ. ಹಾಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಅವರ ಬೋಳೂರು ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ. ಕರ್ನಾಟಕದಾದ್ಯಂತ ಇಂದು 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ
ಸ್ಪರ್ಧಿಗಳ ಕೊಸರಾಟಕ್ಕೆ ಕಿಚ್ಚ ಗರಂ ಬಿಗ್ ಬಾಸ್ ವೇದಿಕೆಯಿಂದಲೇ ಹೊರ ನಡೆದ ಕಿಚ್ಚ ಸುದೀಪ್!
ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಾರದ ಕತೆಯನ್ನು ನಡೆಸಿಕೊಡಲು ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಆದರೆ ಅಚ್ಚರಿ ಎಂಬಂತೆ ಬಿಗ್ಬಾಸ್ ವೇದಿಕೆ ಮೇಲಿಂದಲೇ ಕಿಚ್ಚ ಸುದೀಪ್ ಹೊರಟು…