ನವದೆಹಲಿ: ಕೊರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಿರುವ ಕೇಂದ್ರ ಗೃಹ ಇಲಾಖೆ ಹೊಸದಾಗಿ ಒಂದು ಕಠಿಣ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಮೇ 3ರಂದು ಎರಡನೇ ಹಂತದ ಲಾಕ್ಡೌನ್ ಅವಧಿ ಮುಗಿಯಬೇಕಿತ್ತು. ಆದರೆ ದಿನೇದಿನೆ ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ನ್ನು ಮೇ 17ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ
ಇದೇ ವೇಳೆ ದೇಶದ ಜಿಲ್ಲೆಗಳನ್ನು ಕೆಂಪು (ಹಾಟ್‌ಸ್ಪಾಟ್), ಹಸಿರು ಮತ್ತು ಅರೇಂಜ್ ವಲಯಗಳಾಗಿ ಅಪಾಯದ ವಿವರಗಳ ಆಧಾರದ ಮೇಲೆ ಈ ಅವಧಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಹೆಚ್‌ಎ ಹೊಸ ಮಾರ್ಗಸೂಚಿಗಳನ್ನು ಸಹ ನೀಡಿದೆ.
ಏನಿದೆ ಮಾರ್ಗಸೂಚಿಯಲ್ಲಿ?
ಮತ್ತೆ 2 ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ
ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ರದ್ದು
ಬಸ್, ರೈಲು ಹಾಗೂ ವಿಮಾನ ಸಂಚಾರ ರದ್ದು
ಮಹಾನಗರಗಳಲ್ಲಿ ಮೆಟ್ರೋ ರೈಲು ಸಂಚಾರ ಇಲ್ಲ
ಟ್ಯಾಕ್ಸಿ ಹಾಗೂ ಆಟೋ ಸಂಚಾರ ಇಲ್ಲ
ಕಟಿಂಗ್ ಶಾಪ್’ಗಳನ್ನು ಎಲ್ಲಿಯೂ ತೆರೆಯುವಂತಿಲ್ಲ
ಅಗತ್ಯ ವಸ್ತು ಪೂರೈಕೆಯ ಗೂಡ್ಸ್ ರೈಲು, ವಾಹನಕ್ಕೆ ಮಾತ್ರ ಅವಕಾಶ
ಗರ್ಭಿಣಿ, ಮಕ್ಕಳು ಹಾಗೂ ವೃದ್ದರು ಕಡ್ಡಾಯವಾಗಿ ಮನೆಯಲ್ಲೇ ಇರಬೇಕು
ಅಗತ್ಯ ವಸ್ತು ಖರೀದಿಗೆ ಮಾತ್ರ ರಸ್ತೆಗೆ ಬರಬೇಕು
ಅನಗತ್ಯವಾಗಿ ಯಾರೂ ಮನೆಯಿಂದ ಹೊರಕ್ಕೆ ಓಡಾಡುವಂತಿಲ್ಲ
ಥಿಯೇಟರ್, ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್ ತೆರೆಯುವಂತಿಲ್ಲ
ಸಂಜೆ 7ರಿಂದ ಮುಂಜಾನೆ 7ರವರೆಗೂ ಕಡ್ಡಾಯವಾಗಿ ಯಾರೂ ಓಡಾಡುವಂತಿಲ್ಲ
ಅಂತಾರಾಜ್ಯ ವಾಹನ ಸಂಚಾರ ಸಂಪೂರ್ಣ ಬಂದ್
ಯಾವುದೇ ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ
ಕೈಗಾರಿಕೆಗಳಿಗೆ ಷರತ್ತುಬದ್ದ ಅನುಮತಿ
ಬಾರ್ ಅಂಡ್ ರೆಸ್ಟೋರೆಂಟ್’ಗಳಿಗೆ ಅನುಮತಿ ಇಲ್ಲ
ಆರೆಂಜ್ ಝೋನ್’ನಲ್ಲಿ ಯಾವುದಕ್ಕೆಲ್ಲ ಅವಕಾಶ?
ನಿಗದಿತ ಪಾಸ್ ಹೊಂದಿರುವವರು ಮಾತ್ರ ಓಡಾಡಬಹುದು
ಅಗತ್ಯವಿದ್ದಲ್ಲಿ ಕಾರು ಬಳಸಬಹುದು. ಆದರೆ, ಕಾರಿನಲ್ಲಿ ಚಾಲಕ ಸೇರಿ ಇಬ್ಬರಿಗೆ ಮಾತ್ರ ಅವಕಾಶ
ಬೈಕ್’ನಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬಹುದು
ಬಸ್ ಸಂಚಾರ ಇರುವುದಿಲ್ಲ.
ಗ್ರೀನ್ ಝೋನ್’ನಲ್ಲಿ ಯಾವುದಕ್ಕೆ ಅವಕಾಶ?
ಈ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್ ಓಡಾಟಕ್ಕೆ ಅವಕಾಶವಿದ್ದು, ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ
ಟ್ಯಾಕ್ಸಿ ಓಡಾಟಕ್ಕೆ ಅವಕಾಶವಿದ್ದು, ಚಾಲಕ ಸೇರಿ ಇಬ್ಬರಿಗೆ ಮಾತ್ರ ಅವಕಾಶ