ಬೆಳ್ತಂಗಡಿ : ಲಾಕ್ ಡೌನ್ ನಿಂದ ಮುಂದೂಡಲ್ಪಟ್ಟಿದ್ದ 10 ನೇ ತರಗತಿಯ ಪರೀಕ್ಷೆಯು ಇದೇ ಬರುವ ಜೂ 25 ರಿಂದ ಜುಲೈ 4 ರ ವರೆಗೆ ಸರ್ಕಾರದ ವಿವಿಧ ಮಾರ್ಗಸೂಚಿಯಂತೆ ನಡೆಯಲಿದ್ದು ತಾಲೂಕಿನಲ್ಲಿ ನಡೆಯಲಿರುವ ಪರೀಕ್ಷೆಗಳ ತಯಾರಿ ಬಗ್ಗೆ ಶಾಸಕರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ಸಭೆ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆಯಿತು ಈ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆ 13 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು ಎಲ್ಲಾ ಪರೀಕ್ಷಾ ಕೇಂದ್ರಗಳ ಸುರಕ್ಷತೆಯ ಬಗ್ಗೆ ಕ್ರಮ ಜರುಗಿಸಬೇಕು ಪ್ರತೀ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವುದು,ಮಕ್ಕಳು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಮಾಡುವ ಮೊದಲು ಸ್ಯಾನಿಟೈಸರ್ ಥರ್ಮಲ್ ಟೆಸ್ಟ್ ಅದಲ್ಲದೆ ಜ್ವರ ಶೀತ ಇರುವಂತಹ ಮಕ್ಕಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ ಸಾಮಾಜಿಕ ಅಂತರದಲ್ಲಿ 20 ಮಕ್ಕಳನ್ನು ಕುಳಿತು ಕೊಳ್ಳಿಸಿ ಪರೀಕ್ಷೆ ಬರೆಸುವ ಬಗ್ಗೆ ಚರ್ಚಿಸಲಾಯಿತು ಪ್ರತೀ ವಿದ್ಯಾರ್ಥಿಗಳಿಗೆ ತಲಾ 3 ಸೆಟ್ ಮರುಬಳಕೆ ಮಾಡಬಹುದಾದ ಮಾಸ್ಕ್ ನೀಡುವುದು,ಅದಲ್ಲದೆ ಹೆಚ್ಚುವರಿಯಾಗಿ ಪ್ರತೀ ಕೇಂದ್ರಗಳಿಗೆ 100 ಮಾಸ್ಕ್ ವ್ಯವಸ್ಥೆ, ಪ್ರತೀ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾರ್ಥಿಗಳನ್ನು ಕರೆದುಕೊಂಡು ಬರಲು ಉಚಿತವಾಗಿ ಬಸ್ಸಿನ ವ್ಯವಸ್ಥೆ, ತುರ್ತು ಆರೋಗ್ಯ ಸೇವೆಗಾಗಿ ಒಂದು ಅಂಬುಲೆನ್ಸ್ ಸಿದ್ದಪಡಿಸಿ ಇಟ್ಟುಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು ಪ್ರತೀ ಕೇಂದ್ರಗಳಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರದಲ್ಲಿ ಥರ್ಮಲ್ ಟೆಸ್ಟ್ ಮಾಡಿಸುವುದಕ್ಕಾಗಿ ಶಾಮಿಯಾನ ಅದಲ್ಲದೆ , ಶೌಚಾಲಯದ ವ್ಯವಸ್ಥೆ ಎಲ್ಲ ರೀತಿಯಲ್ಲೂ ಮಕ್ಕಳಿಗೆ ಗೊಂದಲ ಆಗದ ರೀತಿಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚರ್ಚಿಸಲಾಯಿತು.ತಾಲೂಕಿನಲ್ಲಿ ನಡೆಯುವ ಹತ್ತನೇ ತರಗತಿಯ ಪರೀಕ್ಷೆಯು ಯಾವುದೇ ಗೊಂದಲ ಇಲ್ಲದೆ ನಡೆಯಬೇಕು ಅದ್ದರಿಂದ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಬೇಕು .ಅದಲ್ಲದೆ ಮಕ್ಕಳಿಗೆ ಮಾನಸಿಕವಾಗಿ ತಯಾರಾಗಲು ಶಿಕ್ಷಕರ ಪಾತ್ರ ಕೂಡ ಅತೀ ಮುಖ್ಯ ,ಎಲ್ಲ ರೀತಿಯಲ್ಲೂ ನನ್ನ ಸಹಕಾರ ಬೆಂಬಲ ನಿಮ್ಮೊಂದಿಗೆ ಇದೆ ಎಂದು ಇಲಾಖಾಧಿಕಾರಿಗಳನ್ನು ಉದ್ದೇಶಿಸಿ ಶಾಸಕ ಹರೀಶ್ ಪೂಂಜ ನುಡಿದರು.
ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…