ಬೆಳ್ತಂಗಡಿ: ಉಜಿರೆಯ ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಚಿತ್ರಾ ಬಿ. ಸಿ. ಯವರಿಗೆ ತುಮಕೂರು ವಿಶ್ವವಿದ್ಯಾಲಯವು PhD ಪದವಿಯನ್ನು ನೀಡಿ ಗೌರವಿಸಿದೆ.
ಉಜಿರೆ ಎಸ್. ಡಿ. ಎಂ. ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರ ಶೈಲೇಶ್ ಕುಮಾರ್ ರವರ ಧರ್ಮಪತ್ನಿ, ಉಜಿರೆಯ ಎಸ್. ಡಿ. ಎಂ. ಕಾಲೇಜಿನ ಸ್ನಾತ್ತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಚಿತ್ರಾ ಬಿ. ಸಿ. ಯವರು ಮೂಲತಃ ಮೂಡಿಗೆರೆ ತಾಲೂಕು ಬೀರ್ಗೂರಿನ ಎಸ್. ಚಂದ್ರೆಗೌಡ ಹಾಗೂ ಬಿ. ಎಮ್. ಇಂದ್ರಮ್ಮ ದಂಪತಿ ಪುತ್ರಿಯಾಗಿರುವ ಇವರು ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಸಂಶೋಧನಾ ವಿಭಾಗದ ಪ್ರೊಫೆಸರ್ ಹಾಗೂ ಚೇರ್ಮನ್ ಡಾ. ಪರಶುರಾಮ ಕೆ. ಜಿ. ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಅವರು ರಚಿಸಿದ್ದಾರೆ.
ಅವರು ಮಂಡಿಸಿರುವ “ಎ ಸ್ಟಡಿ ಆನ್ ವರ್ಕ್ ಲೈಫ್ ಬ್ಯಾಲೆನ್ಸ್ ಓಫ್ ಕೆ. ಎಸ್.ಆರ್. ಟಿ. ಸಿ. ಡ್ರೈವರ್ಸ್ ವಿಥ್ ಸ್ಪೆಷಲ್ ರೆಫೆರೆನ್ಸ್ ಟು ಮೈಸೂರು ಡಿವಿಷನ್” ಎನ್ನುವ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯ PhD ಪದವಿಯನ್ನು ನೀಡಿ ಗೌರವಿಸಿದೆ.