SSLC ಪರೀಕ್ಷೆಗೆ ಸಿದ್ಧತೆ ಆರಂಭಿಸಿ: ಶಿಕ್ಷಣ ಸಚಿವರ ಸೂಚನೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಶೀಘ್ರದಲ್ಲಿಯೇ ನಡೆಸಲು ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಅಲ್ಲದೇ ಡಿಡಿಪಿಐಗಳಿಗೆ ಸಚಿವರೇ ಖುದ್ದು ಸೂಚನೆ ನೀಡಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶವನ್ನು ಸಡಿಲ ಮಾಡಲಾಗಿದೆ. ಮೇ 17ರಂದು ಮೂರನೇ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ. ಹೀಗಾಗಿ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಸದ್ಯದಲ್ಲಿಯೇ ನಡೆಸಲು ಚಿಂತನೆ ನಡೆಸಲಾಗಿದೆ.

ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲಾ ಜಿಲ್ಲೆಗಳ ಡಿಡಿಪಿಐಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ್ದಾರೆ. ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತ ಸುರೇಶ್ ಕುಮಾರ್ ಅವರು ಸೂಚನೆಯನ್ನು ನೀಡಿದ್ದಾರೆ.

ಪ್ರತೀ ಪರೀಕ್ಷಾ ಕೊಠಡಿಗಳಲ್ಲಿ ಕೇವಲ 24 ವಿದ್ಯಾರ್ಥಿಗಳಿಗೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಹೀಗಾಗಿ ಹೆಚ್ಚುವರಿ ಕೊಠಡಿಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಎಸ್ಎಸ್ಎಲ್ ಸಿ ಪರೀಕ್ಷಾ ಕೊಠಡಿಗಳಲ್ಲಿ ಪ್ರತೀ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಸ್ಕ್ರೀನಿಂಗ್ ಗೆ ಒಳಪಡಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು. ಇನ್ನು ಕಂಟೈನ್ಮೆಂಟ್ ಪರೀಕ್ಷಾ ಕೇಂದ್ರಗಳನ್ನು ಶೀಪ್ಟ್ ಮಾಡುವಂತೆ ಸೂಚನೆ ನೀಡಲಾಗಿದೆ.

ಮಾಸ್ಕ್ , ಸ್ಯಾನಿಟೈಜರ್ ಹಾಗೂ ಜ್ವರ ತಪಾಸಣೆ ಕಡ್ಡಾಯ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಯಾವುದೇ ವಿದ್ಯಾರ್ಥಿಯೂ ನೆಲದ ಮೇಲಾಗಲೀ, ಬಯಲಿನಲ್ಲಾಗಲೀ ಪರೀಕ್ಷೆ ಬರೆಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದ ಸಚಿವರು, ಅಗತ್ಯವಾದ ಡೆಸ್ಕ್, ಬೆಂಚ್ ಗಳನ್ನು ಅಸುಪಾಸಿನ ಶಾಲೆಗಳಿಂದ ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ವಾತಾವರಣವನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.


ಆಂಗ್ಲ ಮಾಧ್ಯಮ ಪುನರ್ಮನನ ತರಗತಿಗಳ ಪ್ರಾರಂಭ : ಶಿಕ್ಷಣ ಇಲಾಖೆ ಚಂದನ ವಾಹಿನಿಯಲ್ಲಿ ಈಗಾಗಲೇ ಪರೀಕ್ಷಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ನಡೆಸುತ್ತಿದ್ದು, ಈ ವಾರದಿಂದಲೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ಪುನರ್ಮನನ ತರಗತಿಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಲಾಖೆಯ ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್ ನಲ್ಲಿಯೂ ಸಹ ಪುನರ್ಮನನ ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಎಸ್ಎಸ್ ಎಲ್ ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಅನುಮಾನ ಗಳಿದ್ದರೆ ಪರೀಕ್ಷೆ ಇಷ್ಟರಲ್ಲೇ ನಡೆಯಲಿದೆ ಎಂಬ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಬೇಕೆಂದು ಸಚಿವರು ಡಿಡಿಪಿ ಐಗಳಿಗೆ ಸೂಚಿಸಿದರು.


ಪರೀಕ್ಷೆ ಸಿದ್ಧತೆಗೆ ಸಮಯ: ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ವಿಷಯವಾರು ಅವಶ್ಯಕ ಅಂತರವನ್ನು ಕಾಪಾಡಿಕೊಳ್ಳಲು ಯೋಜನೆ ರೂಪಿಸಬೇಕೆಂದು ಇಲಾಖಾ ಆಯುಕ್ತರಿಗೆ ಸೂಚಿಸಿದ ಸುರೇಶ್ ಕುಮಾರ್, ಈಗಾಗಲೇ ಬೇರೆ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಅವರು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಕುರಿತಂತೆ ಕ್ರಿಯಾಯೋಜನೆ ರೂಪಿಸಬೇಕೆಂದು ಸೂಚಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ ಕುರಿತು, ಆನ್ ಲೈನ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಶ್ನೆ ಪತ್ರಿಕೆ-ಉತ್ತರ ಪತ್ರಿಕೆ ವಿನಿಮಯ, ಸಹಾಯವಾಣಿ ಮೂಲಕ ಸಂದೇಹಗಳ ನಿವಾರಣೆ, ಸ್ಥಳೀಯ ರೇಡಿಯೋ ಕೇಬಲ್ ಟಿವಿ ಚಾನೆಲ್ ಗಳ ಮೂಲಕ ಬೋಧನಾ ಪ್ರಕ್ರಿಯೆ ನಿರ್ವಹಣೆ ಸೇರಿದಂತೆ ಇಲಾಖೆಯ ಜಿಲ್ಲಾ ಆಡಳಿತಗಳ ಹಲವಾರು ಉಪಕ್ರಮಗಳನ್ನು ಶ್ಲಾಘಿಸಿದ ಸಚಿವರು, ಪರೀಕ್ಷೆಗಳನ್ನುತುಂಬಾ ಆತ್ಮವಿಶ್ವಾಸದಿಂದ ಎದುರು ನೋಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಇದೇ ರೀತಿಯ ಭರವಸೆ ಮೂಡಿಸುವ ಪ್ರಯತ್ನಗಳು ಪರೀಕ್ಷಾ ಪಕ್ರಿಯೆ ಪೂರ್ಣಗೊಳ್ಳುವವರೆಗೆ ನಿರಂತರವಾಗಿ ಜಾರಿಯಲ್ಲಿರಲಿ ಎಂದು ಸೂಚಿಸದರು.

Spread the love
  • Related Posts

    ಸಿಯುಇಟಿ ಜೀವಶಾಸ್ತ್ರದಲ್ಲಿ ಶೇ.100 ಪರ್ಸೆಂಟೈಲ್ಎಕ್ಸ್ ಪರ್ಟ್ ವಿದ್ಯಾರ್ಥಿನಿ ಅದ್ವಿತೀಯ.ಎಂ ರಾಷ್ಟ್ರ ಮಟ್ಟದ ಸಾಧನೆ

    ಮಂಗಳೂರು: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್ ಟಿಎ)ಯು ಕೇಂದ್ರ ವಿಶ್ವವಿದ್ಯಾಲಯ ಹಾಗೂ ದೇಶದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್‌ನ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರಮಟ್ಟದ ಕಾಮನ್ ಪ್ರವೇಶ ಪರೀಕ್ಷೆಯಾದ ಯೂನಿವರ್ಸಿಟಿ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅದ್ವಿತೀಯ ಎಂ…

    Spread the love

    “ಜೆಒಸಾ ಕೌನ್ಸಿಲಿಂಗ್‌ನಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಸಾಧನೆ; ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ-ಎನ್‌ಐಟಿಗಳಲ್ಲಿ ಸ್ಥಾನ”

    ಐಐಟಿ ದೆಹಲಿ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಎಕ್ಸೆಲ್ ವಿದ್ಯಾರ್ಥಿಗಳ ಆಯ್ಕೆ ಗುರುವಾಯನಕೆರೆ, ಜೂನ್ 18: ಭಾರತದ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಾದ ಐಐಟಿ, ಎನ್‌ಐಟಿ, ಐಐಐಟಿ ಹಾಗೂ ಇತರೆ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳ (ಜಿಎಫ್‌ಟಿಐ) ಪ್ರವೇಶಕ್ಕಾಗಿ ಕೇಂದ್ರ ಶಿಕ್ಷಣ…

    Spread the love

    You Missed

    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    • By admin
    • July 30, 2026
    • 4 views
    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ ನೆರವಿಗಾಗಿ ಮನವಿ

    • By admin
    • July 30, 2026
    • 11 views
    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ  ನೆರವಿಗಾಗಿ ಮನವಿ

    ಬೆಳ್ತಂಗಡಿ ಕ್ಷೇತ್ರದ ಧಾರ್ಮಿಕ-ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಉಪಮುಖ್ಯಮಂತ್ರಿಗೆ ಶಾಸಕ ಹರೀಶ್ ಪೂಂಜಾರವರಿಂದ ಮನವಿ

    • By admin
    • July 30, 2026
    • 9 views
    ಬೆಳ್ತಂಗಡಿ ಕ್ಷೇತ್ರದ ಧಾರ್ಮಿಕ-ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಉಪಮುಖ್ಯಮಂತ್ರಿಗೆ ಶಾಸಕ ಹರೀಶ್ ಪೂಂಜಾರವರಿಂದ ಮನವಿ

    ಬೆಳ್ತಂಗಡಿ: ಗುರುವಾಯನಕೆರೆ-ವೇಣೂರಿನ ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಕಾರ್ಯ, ಶಾಸಕರ ತುರ್ತು ಸ್ಪಂದನೆ

    • By admin
    • July 29, 2026
    • 9 views
    ಬೆಳ್ತಂಗಡಿ: ಗುರುವಾಯನಕೆರೆ-ವೇಣೂರಿನ  ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಕಾರ್ಯ, ಶಾಸಕರ ತುರ್ತು ಸ್ಪಂದನೆ

    30 ವರ್ಷಗಳಿಂದ ಶಾಪಗ್ರಸ್ತವಾಗಿರುವ ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ರಸ್ತೆ: ಚುನಾವಣೆ ಬಂದಾಗ ಶಿಲಾನ್ಯಾಸ, ಬಳಿಕ ಮರೆತುಬಿಡುವ ಆರೋಪ

    • By admin
    • July 29, 2026
    • 10 views
    30 ವರ್ಷಗಳಿಂದ ಶಾಪಗ್ರಸ್ತವಾಗಿರುವ ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ರಸ್ತೆ: ಚುನಾವಣೆ ಬಂದಾಗ ಶಿಲಾನ್ಯಾಸ, ಬಳಿಕ ಮರೆತುಬಿಡುವ ಆರೋಪ

    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ ಹಗರಣ – ಬಂಧನ ಭೀತಿಯಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ!

    • By admin
    • July 25, 2026
    • 13 views
    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ ಹಗರಣ – ಬಂಧನ ಭೀತಿಯಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ!