ಉತ್ತರಪ್ರದೇಶ: ನಾಲ್ವರು ಯುವಕರೊಂದಿಗೆ ಓಡಿ ಹೋದ ಯುವತಿಗೆ ಯಾರೊಂದಿಗೆ ವಿವಾಹ ಮಾಡೋದು ಎಂದು ಗೊತ್ತಾಗದೇ ಚೀಟಿ ಎತ್ತಿ ಅದರಲ್ಲಿ ಹೆಸರು ಬಂದ ಯುವಕನೊಂದಿಗೆ ಮದುವೆ ಮಾಡಿಸಿದ ಘಟನೆ ನಡೆದಿದೆ.
ಇಂತಹದೊಂದು ವಿಚಿತ್ರ ಘಟನೆ ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಅಜೀಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಗ್ರಾಮದ ಹುಡುಗಿ ನಾಲ್ವರು ಹುಡುಗರ ಜೊತೆ ಮನೆ ಬಿಟ್ಟು ಹೋಗಿದ್ದು, ಅವರಲ್ಲೊಬ್ಬ ಯುವಕನ ಸಂಬಂಧಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದಳು. 5 ದಿನವಾದರೂ ಮಗಳು ಪತ್ತೆಯಾಗದಿದ್ದಾಗ ಪೋಷಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಪೊಲೀಸರ ಜೊತೆ ಗ್ರಾಮಸ್ಥರು ಸಹ ಹುಡುಕಾಟಕ್ಕೆ ಮುಂದಾಗಿದ್ದು, ಅಂತಿಮವಾಗಿ ಹುಡುಗಿ ನಾಲ್ವರು ಯುವಕರೊಂದಿಗೆ ಸಿಕ್ಕಿಬಿದ್ದಿದ್ದಳು. ಕೊನೆಗೆ ಯಾರೊಂದಿಗೆ ಮದುವೆ ಮಾಡೋದು ಅಂತಾ ಗೊತ್ತಾಗದೇ ಗ್ರಾಮಸ್ಥರು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.