ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದರ್ಶನ್ ಕುಟುಂಬಕ್ಕೆ ಕಡಿರುದ್ಯಾವರ ಗ್ರಾ.ಪಂ ವತಿಯಿಂದ ಸಾಂತ್ವನ ಧನ ವಿತರಣೆ

ಕಡಿರುದ್ಯಾವರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದರ್ಶನ್ ಕುಟುಂಬಸ್ಥರಿಗೆ ಕಡಿರುದ್ಯಾವರ ಗ್ರಾಮ ಪಂಚಾಯತ್ ವತಿಯಿಂದ ಸಾಂತ್ವನಧನ ನೀಡಲಾಯಿತು.

ಸೀಟು ರಕ್ಷಿತಾರಣ್ಯ ಪ್ರದೇಶದಲ್ಲಿ ನಡೆದಿದ್ದ ಬೈಕ್ ಮತ್ತು ಬಸ್ಸು ಅಪಘಾತದಲ್ಲಿ ಮೃತರಾಗಿದ್ದ ಸುದರ್ಶನ್ ರವರ ಮನೆಗೆ ಗ್ರಾ.ಪಂ ಅಧ್ಯಕ್ಷ ಅಶೋಕ್ ಕುಮಾರ್ ನೇತೃತ್ವದ ತಂಡ ಬೇಟಿ ನೀಡಿ 5 ಸಾವಿರ ರೂ. ಮೊತ್ತದ ಚೆಕ್ ನ್ನು ಮೃತರ ತಾಯಿ ಗುಲಾಬಿ ಯವರಿಗೆ ನೀಡಿ ಸಾಂತ್ವನ ತಿಳಿಸಿದರು.

READ ALSO

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಗುರುಪ್ರಸಾದ್, ಸಾವಿತ್ರಿ‌ ,ನಳಿನಿ,ಮತ್ತು ಪಿಡಿಓ ಜಯಕೀರ್ತಿ ಹೆಚ್.ಬಿ ಉಪಸ್ಥಿತರಿದ್ದರು.