ಕಾಬೂಲ್: ಅಫ್ಗಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಸಹೋದರ ರೋಹುಲ್ಲಾ ಸಲೇಹ್‌ರನ್ನು ತಾಲಿಬಾನ್ ಪಡೆಗಳು ಕೊಂದಿವೆ.
ಪಂಜ್‌ಶಿರ್‌ನಲ್ಲಿ ತಾಲಿಬಾನ್‌ಗಳೊಂದಿಗಿನ ಘರ್ಷಣೆಯಲ್ಲಿ ರೋಹುಲ್ಲಾ ಸಲೇಹ್ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರನ್ನು ತಾಲಿಬಾನ್ ಉಗ್ರರು ಚಿತ್ರಹಿಂಸೆ ನೀಡಿ, ಗುಂಡಿಕ್ಕಿ ಕೊಂದಿದ್ದಾರೆ. ಗುರುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ರೋಹುಲ್ಲಾ ಸಾಲೇಹ್ ಹತ್ಯೆ ನಡೆದಿದೆ ಎನ್ನಲಾಗಿದೆ. ರೋಹುಲ್ಲಾ ಸಲೇಹ್ ಅವರ ಹತ್ಯೆ ಸಂಗತಿಯನ್ನು ಅವರ ಸೋದರಳಿಯ ಖಚಿತಪಡಿಸಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ಶುಕ್ರವಾರ ವರದಿ ಮಾಡಿದೆ.
ಅಫ್ಗಾನಿಸ್ತಾನವನ್ನು ತಾಲಿಬಾನ್‌ಗಳು ವಶಪಡಿಸಿಕೊಳ್ಳುತ್ತಲೇ ಅಧ್ಯಕ್ಷ ಆಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದರು. ದೇಶದಲ್ಲೇ ಉಳಿದಿದ್ದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ತಾವೇ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ.