ದೋಣಿ ಅಪಘಾತ: ಮೀನುಗಾರ ನೀರುಪಾಲು? ಮಂಗಳೂರಿನ ಪಣಂಬೂರು ಸಮುದ್ರತೀರದಲ್ಲಿ ನಡೆದ ಘಟನೆ!

ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಮೀನುಗಾರ ನೀರು ಪಾಲಾಗಿದ್ದಾರೆ.

ಅಝರ್ ಮಾಲೀಕತ್ವದ ಗಿಲ್ ನೆಟ್ ಬೋಟ್ ಇದಾಗಿದ್ದು, ಅವಘಡ ಸಂಭವಿಸಿ ನೀರುಪಾಲಾಗಿದ್ದ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

READ ALSO

ಈ ಪೈಕಿ ಒಬ್ಬ ನಾಪತ್ತೆಯಾಗಿದ್ದು ಆತನನ್ನು ಶರೀಫ್ ಎಂದು ಗುರುತಿಸಲಾಗಿದೆ. ಸದ್ಯ ದೋಣಿಯನ್ನು ದಡಕ್ಕೆ ತರಲಾಗಿದೆ.