ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

ಗುರುವಾಯನಕೆರೆ: ಹತ್ತನೇ ತರಗತಿಯ ಬಳಿಕ ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಬುದ್ಧಿವಂತಿಕೆ ಇದೆ. ಎಕ್ಸೆಲ್ ನ್ನು ಆಯ್ಕೆ ಮಾಡಿಕೊಂಡ ನೀವು ಬುದ್ಧಿವಂತರು. ಯಾಕೆಂದರೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಏಮ್ಸ್, ಜಿಪ್ಯಾರ್,ಐಐಟಿ, ಎನ್ ಐ ಐ ಟಿ ಸೇರಿ ಭಾರತದ ಪ್ರತಿಷ್ಠಿತ ಸಂಸ್ಥೆಗಳಿಗೆ ಹಲವು ವಿದ್ಯಾರ್ಥಿಗಳನ್ನು ಕಳುಹಿಸಿ ಕೊಟ್ಟ ಹಿರಿಮೆ ಎಕ್ಸೆಲ್ ನದು. ಇಂಥ ಸಂಸ್ಥೆಯಲ್ಲಿ ಗುರುಗಳು ಹೇಳಿಕೊಟ್ಟದ್ದನ್ನು ಶ್ರದ್ಧೆಯಿಂದ ಕಲಿತರೆ ಸಾಕು. ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ಖ್ಯಾತ ಚಿತ್ರ ನಿರ್ದೇಶಕ, ಮನೋ ವಿಶ್ಲೇಷಕ ಸ್ಮಿತೇಶ್‌ ಬಾರ್ಯ ಅವರು ಹೇಳಿದರು.

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯಂಟೇಶನ್- ಸ್ವಾಗತಂನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಎಕ್ಸೆಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಚಿಂತ್ಯದಾಸ್ ಅಳದಂಗಡಿ ಅವರು ಮಾತನಾಡಿ, ಪಿಯುಸಿಯ ಎರಡು ವರ್ಷ ಕಠಿಣ ಶ್ರಮದ ಮೂಲಕ ನಮ್ಮ ಗುರಿ ಸಾಧನೆಗೆ ತಳಪಾಯ ಹಾಕಿ ಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್‌ ಮಾತನಾಡಿ ವಿದ್ಯಾರ್ಥಿಗಳ ಗುರಿ ಈಡೇರಿಸಲು ನಾವು ಸಂಪೂರ್ಣ ಬದ್ಧರಾಗಿರುತ್ತೇವೆ. ನಿಮ್ಮ ಕನಸು ನನಸು ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

ನೀಟ್ ಪರೀಕ್ಷೆಯ ಬಗ್ಗೆ ಭೌತ ವಿಜ್ಞಾನ ವಿಭಾಗಫ ಮುಖ್ಯಸ್ಥ ಡಾ ಸತ್ಯನಾರಾಯಣ ಭಟ್, ಜೆ ಇ ಇ, ಸಿ ಇ ಟಿ ಪರೀಕ್ಷೆಗಳ ಬಗ್ಗೆ ಭೌತ ವಿಜ್ಞಾನ ವಿಭಾಗದ ಶ್ರೀನಿಧಿ ರಾಜ್ ಶೆಟ್ಟಿ ಮಾಹಿತಿ ನೀಡಿದರು. ಪಿಯುಸಿ ಹಾಗೂ ಸಿ ಇ ಟಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹತ್ತನೆಯ ತರಗತಿಯಲ್ಲಿ ಪೂರ್ಣಾಂಕ ಪಡೆದು, ಪ್ರಥಮ ಪಿಯುಸಿಗೆ ಎಕ್ಸೆಲ್ ನಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಎಕ್ಸೆಲ್‌ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಎಂ ಸ್ವಾಗತಿಸಿದರು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯ ಡಾ. ಪ್ರಜ್ವಲ್ ಕಜೆ ವಂದಿಸಿದರು. ಉಪನ್ಯಾಸಕ ಮೊಹಮ್ಮದ್ ಮುನೀರ್ ನಿರೂಪಿಸಿದರು.

Spread the love
  • Related Posts

    ಬೆಳ್ತಂಗಡಿ: ಗುರುವಾಯನಕೆರೆ-ವೇಣೂರಿನ ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಕಾರ್ಯ, ಶಾಸಕರ ತುರ್ತು ಸ್ಪಂದನೆ

    ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗುರುವಾಯನಕೆರೆ–ವೇಣೂರು ಮುಖ್ಯರಸ್ತೆಯ ಪಡಂಗಡಿ ಭಾಗದಲ್ಲಿ ಇತ್ತೀಚಿನ ಭಾರೀ ಮಳೆಯಿಂದ ರಸ್ತೆ ಹದಗೆಟ್ಟು ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಶಾಸಕ ಶ್ರೀ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಸ್ಥಳವನ್ನು ಪರಿಶೀಲಿಸಿ, ಸಾರ್ವಜನಿಕರ…

    Spread the love

    30 ವರ್ಷಗಳಿಂದ ಶಾಪಗ್ರಸ್ತವಾಗಿರುವ ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ರಸ್ತೆ: ಚುನಾವಣೆ ಬಂದಾಗ ಶಿಲಾನ್ಯಾಸ, ಬಳಿಕ ಮರೆತುಬಿಡುವ ಆರೋಪ

    ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ಸಂಪರ್ಕ ರಸ್ತೆ ಕಳೆದ ಹಲವು ದಶಕಗಳಿಂದ ಅಭಿವೃದ್ಧಿಯ ನಿರೀಕ್ಷೆಯಲ್ಲೇ ಉಳಿದಿದ್ದು, ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ಪ್ರಮುಖ ಸಂಪರ್ಕ ಕಲ್ಪಿಸುವ 6 ಕಿಲೋಮೀಟರ್ ಉದ್ದದ ಈ ರಸ್ತೆಗೆ ಸಮರ್ಪಕ…

    Spread the love

    You Missed

    ಬೆಳ್ತಂಗಡಿ: ಗುರುವಾಯನಕೆರೆ-ವೇಣೂರಿನ ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಕಾರ್ಯ, ಶಾಸಕರ ತುರ್ತು ಸ್ಪಂದನೆ

    • By admin
    • July 29, 2026
    • 4 views
    ಬೆಳ್ತಂಗಡಿ: ಗುರುವಾಯನಕೆರೆ-ವೇಣೂರಿನ  ಹದಗೆಟ್ಟ ರಸ್ತೆಯ ತುರ್ತು ದುರಸ್ತಿ ಕಾರ್ಯ, ಶಾಸಕರ ತುರ್ತು ಸ್ಪಂದನೆ

    30 ವರ್ಷಗಳಿಂದ ಶಾಪಗ್ರಸ್ತವಾಗಿರುವ ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ರಸ್ತೆ: ಚುನಾವಣೆ ಬಂದಾಗ ಶಿಲಾನ್ಯಾಸ, ಬಳಿಕ ಮರೆತುಬಿಡುವ ಆರೋಪ

    • By admin
    • July 29, 2026
    • 5 views
    30 ವರ್ಷಗಳಿಂದ ಶಾಪಗ್ರಸ್ತವಾಗಿರುವ ಮುಂಡಾಜೆ ಗ್ರಾಮದ ಸೀಟು–ಕಾಯರ್ತೋಡಿ–ಕೊಡಂಗೆ–ಮೂಲಾರು ಕುಡೆಂಚಿ ರಸ್ತೆ: ಚುನಾವಣೆ ಬಂದಾಗ ಶಿಲಾನ್ಯಾಸ, ಬಳಿಕ ಮರೆತುಬಿಡುವ ಆರೋಪ

    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ ಹಗರಣ – ಬಂಧನ ಭೀತಿಯಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ!

    • By admin
    • July 25, 2026
    • 9 views
    ಸಕಲೇಶಪುರ: ಅಕ್ರಮ ಭೂ ಮಂಜೂರಾತಿ ಹಗರಣ – ಬಂಧನ ಭೀತಿಯಿಂದ ನೂರಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ!

    ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ: ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಹಾಗೂ ಸ್ವಚ್ಛತೆ ಅಗತ್ಯ – ಡಾ. ನಿಶ್ಚಯ್ ಎಚ್.ಎನ್.

    • By admin
    • July 24, 2026
    • 7 views
    ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ: ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಹಾಗೂ ಸ್ವಚ್ಛತೆ ಅಗತ್ಯ – ಡಾ. ನಿಶ್ಚಯ್ ಎಚ್.ಎನ್.

    ಕರಾವಳಿಯಲ್ಲಿ ಮುಂದುವರಿದ ಮಳೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    • By admin
    • July 24, 2026
    • 7 views
    ಕರಾವಳಿಯಲ್ಲಿ ಮುಂದುವರಿದ ಮಳೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶುಕ್ರವಾರ 24ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

    • By admin
    • July 23, 2026
    • 9 views
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶುಕ್ರವಾರ 24ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ