ಪತ್ರಕರ್ತ, ಶಿಕ್ಷಣ ಪ್ರೇಮಿ ಮನೋಹರ್ ಬಳಂಜರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬೆಳ್ತಂಗಡಿ: ಪತ್ರಿಕಾರಂಗದಲ್ಲಿ ಹಾಗೂ ಸಮಾಜಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜರಿಗೆ 2026 ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪತ್ರಿಕಾರಂಗದಲ್ಲಿ 20 ವರ್ಷ ಅನುಭವ ಹೊಂದಿದ ಇವರು ಯುವಶಕ್ತಿಕ್ರಾಂತಿ ಪತ್ರಿಕೆಯ ಮೂಲಕ ಪತ್ರಿಕಾರಂಗಕ್ಕೆ ಬಂದ ಇವರು ಬಳಿಕ ಪ್ರಜಾವಾಣಿ, ಸಂಜೆವಾಣಿ , ನಮ್ಮಬಂಟ್ವಾಳ ಪತ್ರಿಕೆಯಲ್ಲಿದ್ದು ಪ್ರಸ್ತುತ ರಾಜ್ಯದ ನಂ 1 ಪತ್ರಿಕೆ ವಿಜಯವಾಣಿ ಪತ್ರಿಕೆಯಲ್ಲಿ ಕಳೆದ 16 ವರ್ಷಗಳಿಂದ ವರದಿಗಾರರಾಗಿದ್ದಾರೆ.

ಅನೇಕ ಮಾನವೀಯ ವರದಿಗಳನ್ನು ಮಾಡಿದ ಇವರು ಅನೇಕ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ವೈದ್ಯಕೀಯ ನೆರವು ನೀಡುವಲ್ಲಿ ಕಾರಣೀಕರ್ತರಾಗಿದ್ದಾರೆ. ಪತ್ರಕರ್ತರ ಗ್ರಾಮವಾಸ್ಥವ್ಯ ಕಾರ್ಯಕ್ರಮದ ನೆತ್ರುತ್ವ ವಹಿಸಿದ ಇವರು ರಾಜ್ಯದಲ್ಲಿ ಬೆಳ್ತಂಗಡಿ ತಾಲೂಕನ್ನು ಗುರುತಿಸುವಂತೆ ಮಾಡಿದ್ದಾರೆ. ಕಟ್ಟಕಡೆಯ ಕುಟುಂಬದ ಕಾಲೋನಿಗಳ ಸಮಸ್ಯೆಗಳನ್ನು ಬೆಳಕಿಗೆ ತಂದು ಅ ಕಾಲೋನಿಗಳಿಗೆ ಸರಕಾರದ ನೆರವು ನೀಡುವಲ್ಲಿ ಯಶಸ್ಸುಯಾಗಿದ್ದಾರೆ.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುವಲ್ಲಿ ಶ್ರಮಿಸಿದ್ದು ಪ್ರಸ್ತುತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳ್ತಂಗಡಿ ಹುಣ್ಸೆಕಟ್ಟೆ ಶ್ರಿರಾಮ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ಪ್ರಗತಿಭಂದು ಒಕ್ಕೂಟದ ಅಧ್ಯಕ್ಷರಾಗಿ, ತಾಲೂಕು ಯುವ ಬಿಲ್ಲವ ವೇದಿಕೆಯ ಪ್ರದಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಬಳಂಜ ಶ್ರಿ ನಾರಾಯಣಗುರು ಸೇವಾ ಸಮಿತಿಯ ನಿರ್ದೇಶಕರಾಗಿದ್ದಾರೆ.

ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾಗಿ ಬಳಂಜ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಕೊರತೆ ಸಂಧರ್ಭದಲ್ಲಿ ಆಂಗ್ಲ ಮಾದ್ಯಮ ,ಗುಣಮಟ್ಟದ ಶಿಕ್ಷಣ, ಸಂಸ್ಕಾರಯುತ ಶಿಕ್ಷಣ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಎರಡು ವರ್ಷದಲ್ಲಿ 130 ಕ್ಕೂ ಅದಿಕ ದಾಖಲಾತಿ ಅಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಳಂಜ ಸರಕಾರಿ ಶಾಲೆಗೆ ರೋಟರಿ ಕ್ಲಬ್ ನೇರವಿಗೆ ಪ್ರಯತ್ನಿಸಿ ಶಾಲೆಗೆ ಸಂಪೂರ್ಣ ಸೋಲಾರ್ ಅಳವಡಿಕೆ, ಕಲಾಮಂದಿರ ಎದುರು ಶೀಟ್ ಅಳವಡಿಕೆ, ಇಂಟರ್ ಲಾಕ್ ಅಳವಡಿಕೆ ಸೇರಿದಂತೆ 14 ಲಕ್ಷ ಅನುದಾನ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಶಾಲೆಯ ಕ್ರೀಡಾಂಗಣ ಅಗಲೀಕರಣ, ಚಿಣ್ಣರ ಅಂಗಣ ,ಇನ್ನಿತರ ಸೌಲಭ್ಯ ಒದಗಿಸಿಕೊಡುವಲ್ಲಿ ಶ್ರಮಿಸಿದ್ದು ಪ್ರತೀ ವರ್ಷ ಸುಮಾರು 6 ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಿ ಮಾನವೀಯ ಸೇವೆಗೆ ಆದ್ಯತೆ ನೀಡಿದ್ದಾರೆ. ಶಿಕ್ಷಣ ಸೇವೆಗೆ ಮುಂದೆ ಅನೇಕ ಯೋಜನೆ ರೂಪಿಸಿದ ಇವರು ವಿವಿಧ ದಾರ್ಮಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಬಳಂಜ ಸುವರ್ಣ ನಿಲಯದ ಬಿ ಸಾಂತಪ್ಪ ಸುವರ್ಣ , ಮೀನಾಕ್ಷಿ ದಂಪತಿಯ ಎರಡನೇ ಪುತ್ರರಾಗಿದ್ದಾರೆ.

Spread the love
  • Related Posts

    ಉತ್ತರಾಖಂಡದ ಜೋಶಿಮಠ ಸಮೀಪದಲ್ಲಿ ಹೆಲಿಕಾಪ್ಟರ್ ಪತನ ಕರ್ನಾಟಕದ ಐವರು ಸೇರಿದಂತೆ ದೆಹಲಿ ಮೂಲದ ಪೈಲಟ್ ಸಾವು

    ಉತ್ತರಾಖಂಡದ ಜೋಶಿಮಠ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಬದರಿನಾಥ್‌ನಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ‘ಟ್ರಾನ್ಸ್ ಭಾರತ್ ಏವಿಯೇಷನ್’ ಸಂಸ್ಥೆಯ ಹೆಲಿಕಾಪ್ಟರ್ ಪತನಗೊಂಡಿದ್ದು, ಮೃತರ ಪೈಕಿ ಐವರು ಬೆಂಗಳೂರಿನವರಾಗಿದ್ದಾರೆ. ಮೃತರನ್ನು ದೆಹಲಿ ಮೂಲದ ಪೈಲಟ್…

    Spread the love

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅ. 22ರವರೆಗೆ ದಸರಾ ರಜೆ ವಿಸ್ತರಣೆ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಸರಾ ರಜೆಯನ್ನು ಒಂದು ದಿನ ಹೆಚ್ಚುವರಿಯಾಗಿ ವಿಸ್ತರಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ದಿನಾಂಕ 22/10/2026 ರಂದು ರಜೆ ಘೋಷಿಸಿ ಆದೇಶ ಹೊರಡಿಸಿದೆ. ಅಕ್ಟೋಬರ್ 21ರಂದು ಐತಿಹಾಸಿಕ ದಸರಾ ಹಬ್ಬದ ಪೂಜೆ ಹಾಗೂ…

    Spread the love

    You Missed

    ಪತ್ರಕರ್ತ, ಶಿಕ್ಷಣ ಪ್ರೇಮಿ ಮನೋಹರ್ ಬಳಂಜರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    • By admin
    • October 31, 2026
    • 6 views
    ಪತ್ರಕರ್ತ, ಶಿಕ್ಷಣ ಪ್ರೇಮಿ ಮನೋಹರ್ ಬಳಂಜರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    ಉತ್ತರಾಖಂಡದ ಜೋಶಿಮಠ ಸಮೀಪದಲ್ಲಿ ಹೆಲಿಕಾಪ್ಟರ್ ಪತನ ಕರ್ನಾಟಕದ ಐವರು ಸೇರಿದಂತೆ ದೆಹಲಿ ಮೂಲದ ಪೈಲಟ್ ಸಾವು

    • By admin
    • October 30, 2026
    • 6 views
    ಉತ್ತರಾಖಂಡದ ಜೋಶಿಮಠ ಸಮೀಪದಲ್ಲಿ ಹೆಲಿಕಾಪ್ಟರ್ ಪತನ ಕರ್ನಾಟಕದ ಐವರು ಸೇರಿದಂತೆ ದೆಹಲಿ ಮೂಲದ ಪೈಲಟ್ ಸಾವು

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅ. 22ರವರೆಗೆ ದಸರಾ ರಜೆ ವಿಸ್ತರಣೆ!

    • By admin
    • October 21, 2026
    • 13 views
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅ. 22ರವರೆಗೆ ದಸರಾ ರಜೆ ವಿಸ್ತರಣೆ!

    ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಕಾಡಿನಿಂದ ಅಕ್ರಮವಾಗಿ ಮರ ಕಡಿದು ದಾಸ್ತಾನು: ನಾವೂರು ನಿವಾಸಿ ಪ್ರಮೋದ್ ಸಾಲ್ಯಾನ್ ವಿರುದ್ದ ಪ್ರಕರಣ ದಾಖಲು

    • By admin
    • October 15, 2026
    • 11 views
    ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಕಾಡಿನಿಂದ ಅಕ್ರಮವಾಗಿ ಮರ ಕಡಿದು ದಾಸ್ತಾನು:   ನಾವೂರು ನಿವಾಸಿ ಪ್ರಮೋದ್ ಸಾಲ್ಯಾನ್ ವಿರುದ್ದ ಪ್ರಕರಣ ದಾಖಲು

    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    • By admin
    • October 12, 2026
    • 10 views
    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    ಸೌದಿ ಅರೇಬಿಯಾ ಏರ್ ಪೋರ್ಟ್‌ ಮೇಲೆ ಹೌತಿ ಉಗ್ರರ ದಾಳಿ – 12 ಮಂದಿ ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ!

    • By admin
    • October 11, 2026
    • 13 views
    ಸೌದಿ ಅರೇಬಿಯಾ ಏರ್ ಪೋರ್ಟ್‌ ಮೇಲೆ ಹೌತಿ ಉಗ್ರರ ದಾಳಿ – 12 ಮಂದಿ ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ!