ಬೆಳ್ತಂಗಡಿ: ಬೆಳ್ತಂಗಡಿ ಪಿ.ಎಂ.ಶ್ರೀ ಮಾದರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ಅಖಿಲ್ ಕುಮಾರ್ (50ವ) ಅವರು ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜೂ 12ರಂದು ನಿಧನರಾದರು.
ಒರ್ವ ಅದ್ಭುತ ಕಬಡ್ಡಿ ತೀರ್ಪುಗಾರರಾಗಿ, ತರಬೇತುದಾರರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ದೈಹಿಕ ಶಿಕ್ಷಣ ಶಿಕ್ಷಕರಾಗಿ ಹೆಸರು ಗಳಿಸಿದ್ದರು. ಅತ್ಯುತ್ತಮ ಸಂಘಟಕರಾಗಿರುವ ಅಖಿಲ್ ಕುಮಾರ್ ಅವರು
ತಾಲೂಕು ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾ. ಅಧ್ಯಕ್ಷರಾಗಿ, ರಾಜ್ಯ ಸರಕಾರಿ ನೌಕರರ ಸಂಘದ ತಾ.ಕ್ರೀಡಾ ಕಾರ್ಯದರ್ಶಿಯಾಗಿ ಸಹಿತ ಅನೇಕ ಸಂಘ ಸಂಸ್ಥಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಎಸ್‌ಎಸ್‌ಎ ವಸತಿ ಶಾಲೆ ಬೆಳ್ತಂಗಡಿಯ ಶಿಕ್ಷಕಿ ಜ್ಯೋತಿ, ಓರ್ವ ಗಂಡು, ಓರ್ವ ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕರಾ ವಿಧಿಗಳು ಇಂದು ಸಂಜೆ ಅವರ ಗೇರುಕಟ್ಟೆಯ ಇಂಚರ ನಿವಾಸದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ.




