
ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲೂರು ತಾಲೂಕು, ಇದರ ವತಿಯಿಂದ ಶ್ರೀ ವೀರಶೈವ ಸಮುದಾಯ ಭವನದಲ್ಲಿ ನಡೆಯುತ್ತಿರುವ 1964 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ನಡೆಸಲಾಯಿತು.
ಕಾರ್ಯಕ್ರಮವನ್ನು ತಾಲೂಕಿನ ತಹಶೀಲ್ದಾರರು ಮಲ್ಲಿಕಾರ್ಜುನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮಾಭಿವೃದ್ಧಿ ಯೋಜನೆ ಮಾಡುವಂಥ ಸಮಾಜ ಸೇವೆ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು, ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ ರೇಣುಕಾ ಪ್ರಸಾದ್ ರವರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ನಿರ್ದೇಶಕರಾದ ಸುರೇಶ್ ಮೊಯ್ಲಿ ಯವರು ಮಾತನಾಡುತ್ತಾ ಮದ್ಯವ್ಯಸನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತವೆ. ಕುಡಿತದ ಚಟದಿಂದ ಹಲವು ಕುಟುಂಬಗಳು ಹಾಳಾಗಿವೆ. ಮದ್ಯವ್ಯಸನದಿಂದ ಕೊಲೆ ಮತ್ತು ದರೋಡೆಯಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶಿಬಿರ ನೆರವಾಗಲಿದೆ ಸಂಸ್ಥೆಯು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಒಂದು ದುಶ್ಚಟ ಇಡೀ ಕುಟುಂಬದ ವಿನಾಶಕ್ಕೆ ಕಾರಣವಾಗುತ್ತದೆ. ವೀರೇಂದ್ರ ಹೆಗಡೆಯವರು ವ್ಯಸನಮುಕ್ತ ಸಮಾಜದ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಇದು 1964ನೇ ಶಿಬಿರವಾಗಿದೆ ಎಂದರು.
ಜನಜಾಗೃತಿ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮುಖೇಶ್ ರವರು ಪ್ರಸ್ತಾವಿಕವಾಗಿ ಶಿಬಿರದ ಬಗ್ಗೆ ವಿಚಾರವನ್ನು ತಿಳಿಸಿದರು, , ಈ ಸಂದರ್ಭದಲ್ಲಿ ಶ್ರೀ ದೇವರಾಜ್ ಎ ಎಸ್ ಐ ಆಲೂರು ಪೊಲೀಸ್ ಠಾಣೆ ಆಲೂರು, ಶ್ರೀ ಸುಬ್ರಮಣ್ಯ ಶರ್ಮ ಕಾರ್ಯನಿರ್ವಹಣಾ ಅಧಿಕಾರಿಗಳು ತಾಲೂಕು ಪಂಚಾಯತ್ ಆಲೂರು, ವೀರಶೈವ ಸಮಾಜ ಆಲೂರು, ಶ್ರೀ ಜಯಣ್ಣ ಉಪಾಧ್ಯಕ್ಷರು ವೀರಶೈವ ಸಮಾಜ ಆಲೂರು, ಶ್ರೀ ಧರ್ಮರಾಜ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ, ಶ್ರೀ ಮಲ್ಲಿಕಾರ್ಜುನ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ,ಶ್ರೀ ಮೋಹನ್ ಕುಮಾರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ, ಶ್ರೀ ಬಾಲಕೃಷ್ಣ ಎಂ ಶೆಟ್ಟಿ ಸದಸ್ಯರ ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ, ಶ್ರೀ ಎಮ್ ಕೆ ರಾಜಶೇಖರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ, ನವಜೀವನ ಸಮಿತಿಯ ಸದಸ್ಯರು,ಮೇಲ್ವಿಚಾರಕರು, ನವಜೀವನ ಸಮಿತಿಯ ಸದಸ್ಯರು ಸೇವಾ ಪ್ರತಿನಿಧಿಗಳು,ಶೌರ್ಯ ವಿಪತ್ತು ತಂಡದ ಸದಸ್ಯರು, ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ಶಿಬಿರಾಧಿಕಾರಿ ಜಯಾನಂದ, ಆರೋಗ್ಯ ಕಾರ್ಯಕರ್ತರು ಶ್ರೀಮತಿ ಜಯಲಕ್ಷ್ಮಿ,ಜನಜಾಗೃತಿ ಮೇಲ್ವಿಚಾರಕರಾದ ವಸಂತ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ರತ್ನಾಕರ್ ಕೊಠಾರಿ ಯವರು ಅತಿಥಿಗಳನ್ನು ಸ್ವಾಗತಿಸಿದರು, ತಾಲೂಕಿನ ಕೃಷಿ ಮೇಲ್ವಿಚಾರಕರಾದ ವಿಘ್ನೇಶ್ ರವರು ಕಾರ್ಯಕ್ರಮ ನಿರೂಪಿಸಿದರು, ಮೇಲ್ವಿಚಾರಕರಾದ ಶ್ರೀಮತಿ ಯಶೋಧ ರವರು ವಂದನಾರ್ಪಣೆ ಮಾಡಿದರು.