ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಇನ್ನಿಲ್ಲ! ಡ್ಯಾಮ್ ನಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಾಗ ನಡೆದ ದುರ್ಘಟನೆ!

ಕೊಚ್ಚಿನ್: ಖ್ಯಾತ ಮಲಯಾಳಂ ನಟ ಅನಿಲ್ ನೆಡುಮಂಗಾಡ್ (48) ತೊಡುಪುಳ ಮಾಲಂಕಾರ ಡ್ಯಾಮ್ ನಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಸಂಜೆ ನಟ ಮತ್ತು ಇತರ ಇಬ್ಬರು ಸ್ನಾನಕ್ಕಾಗಿ ಡ್ಯಾಮ್ ಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ವಿಚಾರಣೆಯ ಪ್ರಕಾರ ನಟ ಮತ್ತು ಅವರ ಸ್ನೇಹಿತರು ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್ ಗೆ ಹೋಗಿದ್ದು ಆಳವಾದ ನೀರಿಗೆ ಇಳಿದಾಗ ನೀರಿನ ಸುಳಿಗೆ ಸಿಲುಕಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ತಕ್ಷಣ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನವಾಗಿಲ್ಲ ಪೊಲೀಸರು ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅನಿಲ್ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ‘ಕಮ್ಮಟ್ಟಿ ಪಾಡಮ್’, ‘ಎನ್ಜನ್ ಸ್ಟೀವ್ ಲೋಪೆಜ್’ ಮತ್ತು ‘ಪೊರಿಂಜು ಮರಿಯಮ್ ಜೋಸ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಬಿನಯಿಸಿದ್ದರು.

ಇತ್ತೀಚೆಗೆ ತೆರೆಕಂಡ ‘ಅಯ್ಯಪ್ಪನುಂಕೊಶಿಯಮ್’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ಅನಿಲ್ ಅಪಾರ ಜನಪ್ರಿಯತೆ ಗಳಿಸಿದ್ದರು.

ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Spread the love
  • Related Posts

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ಮೂಡುಬಿದಿರೆ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡುಬಿದಿರೆಯ ಕೇಮಾರುವಿನಲ್ಲಿರುವ ಶ್ರೀ ಕ್ಷೇತ್ರ ಸಾಂದೀಪನಿ ಸಾಧನಾಶ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾ‌ರ್ ಅವರು ₹1 ಕೋಟಿ ಅನುದಾನ ಘೋಷಿಸಿದ್ದು, ಈ ಕುರಿತು ಮಠದ ಈಶ ವಿಠಲದಾಸ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.…

    Spread the love

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ರೈತರ ಸಮಸ್ಯೆಗಳ ಕುರಿತು ಪ್ರತ್ಯೇಕವಾಗಿ ಚರ್ಚೆ; ಕರಾವಳಿ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳ ನಿರೀಕ್ಷೆ ಮಂಗಳೂರು: ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಸ್ಥಳೀಯ ರೈತರಲ್ಲಿ…

    Spread the love

    You Missed

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    • By admin
    • September 19, 2026
    • 2 views
    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ನಾವೂರು–ಕುತ್ಲೂರು ದುರ್ಗಮ ಪ್ರದೇಶಗಳ ವಿದ್ಯುದೀಕರಣಕ್ಕೆ ವನ್ಯಜೀವಿ ಅನುಮತಿ11 ಕೆ.ವಿ. ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅವಕಾಶ – ಶಾಸಕ ಹರೀಶ್ ಪೂಂಜ

    • By admin
    • September 18, 2026
    • 9 views

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    • By admin
    • September 18, 2026
    • 9 views
    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ಆಟಿಡೊಂಜಿದಿನ ಧರ್ಮಸ್ಥಳ ಕನ್ಯಾಡಿ 2

    • By admin
    • September 15, 2026
    • 20 views

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    • By admin
    • September 15, 2026
    • 30 views
    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 14 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ