ಅರೇಕಾ ಟೀ ಖ್ಯಾತಿಯ ಯುವ ಉದ್ಯಮಿ ನಿವೇದನ್ ನಂಪೆ ಸಂಶೋಧಿಸಿದ ಅರೇಕಾ ಸಾನಿಟೈಸರ್!

ಶಿವಮೊಗ್ಗ: ಕೊರೋನಾ ವೈರಸ್ ಪ್ರಪಂಚದಾದ್ಯಂತ ಹರಡಿರುವ ಮಧ್ಯೆ, ಅನೇಕ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಸ್ಯಾನಿಟೈಜರ್‌ಗಳನ್ನು ಉತ್ಪಾದಿಸುವ ಮೂಲಕ ಲಕ್ಷಾಂತರ ಸಂಪಾದಿಸುತ್ತಿವೆ, ಆದರೆ ಇದೀಗ ಯುವ ಉದ್ಯಮಿ ನಿವೇದನ್ ನಂಪೆಯವರು ನೈಸರ್ಗಿಕವಾಗಿ ಅಡಿಕೆಯಿಂದ ಸ್ಯಾನಿಟೈಜರ್‌ಗಳನ್ನು ತಯಾರಿಸುವ ಹೊಸ ಪ್ರಯತ್ನ ನಡೆಸಿದ್ದಾರೆ.

ಮಾಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ರೈತರು ಅಡಿಕೆ ಬೆಳೆಯುತ್ತಿದ್ದಾರೆ, ಇದನ್ನು ಮುಖ್ಯವಾಗಿ ಗುಟ್ಕಾ ಉತ್ಪಾದಿಸಲು ಬಳಸಲಾಗುತ್ತಿತ್ತು. ನಿವೇದನ್ ನಂಪೆ, ಅರೇಕಾ ಟೀ ಮತ್ತು ಸುಗಂಧ ದ್ರವ್ಯಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದರು. ಈಗ ಅವರು ಅರೇಕಾ ಸ್ಯಾನಿಟೈಜರ್‌ಗಳನ್ನು ತಯಾರಿಸಿದ್ದು ಮಾರುಕಟ್ಟೆಗೆ ಪರಿಚಯಿಸುವ ಯತ್ನದಲ್ಲಿದ್ದಾರೆ.

READ ALSO

ಅಡಿಕೆಯಲ್ಲಿ ಆ್ಯಂಟಿ ಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದಕ್ಕೆ ಗ್ಯಾಲಿಕ್ ಆ್ಯಸಿಡ್, ಟ್ಯಾನಿಚ್ ಸೇರಿದಂತೆ ಇತರೆ ಅಂಶಗಳನ್ನು ಬಳಸಿ ಇವುಗಳ ಮೇಲೆ ಸಂಶೋಧನೆ ನಡೆಸಿ ಈಗ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಿದ್ದಾರೆ.

ಸರ್ಕಾರ ನಿಗದಿಪಡಿಸಿದಂತೆ ಇದಕ್ಕೆ ಶೇ.70ರಷ್ಟು ಆಲ್ಕೋಹಾಲಿಕ್ ಅಂಶವನ್ನು ಬಳಕೆ ಮಾಡಿದ್ದಾರೆ. ಅಡಿಕೆಯಲ್ಲಿ ಆ್ಯಂಟಿ ವೈರಲ್ ಪ್ರಾಪರ್ಟಿ ಇದ್ದು ಈ ಉತ್ಪನ್ನವು ಸಂಪೂರ್ಣವಾಗಿ ಗಿಡಮೂಲಿಕೆ ಉತ್ಪನ್ನವಾಗಿದ್ದು ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಲಾಗಿದೆ,ಪರಿಮಳಕ್ಕಾಗಿ ಕಿತ್ತಳೆ ಆಯಿಲ್ ಬಳಸಿಕೊಂಡು ಸ್ಯಾನಿಟೈಜರ್ ತಯಾರಿಸಲಾಗಿದೆಯೆಂದು
ನಿವೇದನ್ ಹೇಳಿಕೊಂಡಿದ್ದಾರೆ.