ಚಿರತೆಯೊಂದಿಗೆ ಸೆಣಸಾಡಿ ತಾಯಿಯ ಪ್ರಾಣ ಉಳಿಸಿದ ಮಗ! ಹಾಸನ ಜಿಲ್ಲೆಯ ಅರಸೀಕೆರೆ ಬೈರಗೊಂಡನಹಳ್ಳಿಯಲ್ಲಿ ನಡೆದ ಘಟನೆ!

ಹಾಸನ : ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಈಗ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದೆ. ಅದರಲ್ಲೂ ಚಿರತೆ ದಾಳಿ ಸಾಮಾನ್ಯ ಅನ್ನೋ ಹಾಗಾಗಿದೆ. ಇದೇ ರೀತಿ ದಾಳಿ ನಡೆಸಿದ ಚಿರತೆಯೊಂದಿಗೆ ಸೆಣಸಿ ಯುವಕನೊಬ್ಬ ತಾಯಿಯ ಜೀವ ಉಳಿಸಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯ ಬೈರಗೊಂಡನಹಳ್ಳಿಯಲ್ಲಿ ನಡೆದಿದೆ.

ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಿರಣ್ ಹಾಗೂ ಆತನ ತಾಯಿ ಚಂದ್ರಮ್ಮ ತಮ್ಮ ಜಮೀನಿಗೆ ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಚಂದ್ರಮ್ಮನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಆಗ ಅಲ್ಲೇ ಇದ್ದ ಕಿರಣ್ ಕೂಡಲೇ ಚಿರತೆ ಮೇಲೆ ಎರಗಿ , ಚಿರತೆ ಜೊತೆ ಸೆಣಸಾಡಿ ತನ್ನ ತಾಯಿಯನ್ನು ಚಿರತೆಯಿಂದ ಕಾಪಾಡಿದ್ದಾನೆ. ಅಮ್ಮನ ಮೇಲೆರಗಿದ ಚಿರತೆಯ ಕುತ್ತಿಗೆಯನ್ನು ಬಿಗಿ ಹಿಡಿದು ಸೆಣಸಾಡಿದ ಕಿರಣ್ ಬರೋಬ್ಬರಿ 15 ನಿಮಿಷಗಳ ಕಾಲ ಸೆಣಸಾಟ ನಡೆಸಿ ಚಿರತೆಯನ್ನು ಹೊಡೆದು ಸಾಯಿಸಿದ್ದಾನೆ.

READ ALSO

ಘಟನೆಯಲ್ಲಿ ಕಿರಣ್ ಹಾಗೂ ಚಂದ್ರಮ್ಮ ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೆತ್ತವ್ವನ ಪ್ರಾಣ ಕಾಪಾಡಿದ ಸಾಹಸಿ ಮಗನಿಗೆ ನಾವು ಶಹಬ್ಬಾಸ್ ಹೇಳಲೇಬೇಕು.!