ಲಾರಿಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ ಬಸ್ ಗೆ ಬೆಂಕಿ ತಗುಲಿ ಇಬ್ಬರು ಮಹಿಳೆಯರು ಸಜೀವ ದಹನ

ಬಾಗಲಕೋಟೆ: ಲಾರಿಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿಯಾಗಿ ಬೆಂಕಿ ತಗುಲಿದ್ದು, ಬಸ್ ನಲ್ಲಿದ್ದ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಸಮೀಪ ಮುಧೋಳ -ಯಾದವಾಡ ರಸ್ತೆಯಲ್ಲಿ ಘಟನೆ ನಡೆದಿದೆ. ಈರವ್ವ ಗಾಣಿಗೇರ(70), ಅಣ್ಣವ್ವ ಗಾಣಿಗೇರ(58) ಮೃತಪಟ್ಟವರು ಎಂದು ಹೇಳಲಾಗಿದೆ.

ಇವರು ಬೆಳಗಾವಿ ಜಿಲ್ಲೆ ಯಾದವಾಡ ಗ್ರಾಮದವರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮಕ್ಕೆ ಮಿನಿ ಬಸ್ ನಲ್ಲಿ ಮದುವೆಗೆ ತೆರಳಿದ್ದ ಅವರು ಮದುವೆ ಮುಗಿಸಿ ಹಿಂತಿರುಗುವಾಗ ಅಪಘಾತವಾಗಿದೆ.

ಮಿನಿ ಬಸ್ ಉರುಳಿ ಬಿದ್ದ ರಭಸಕ್ಕೆ ಬೆಂಕಿ ತಗುಲಿದ್ದು, ಇಡೀ ಬಸ್ ಗೆ ವ್ಯಾಪಿಸಿದೆ. ಕೆಲವರು ಬಸ್ ನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಬಸ್ ಹೊತ್ತಿ ಉರಿದಿದೆ.

ಇದರಿಂದಾಗಿ ಹೊರಬರಲಾರದೆ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Spread the love
  • Related Posts

    “ಜೀವನದ ಮೌಲ್ಯ ವರ್ಷಗಳಲ್ಲಿ ಅಲ್ಲ, ಬದುಕಿನ ರೀತಿಯಲ್ಲಿ” – ಡಾ. ಪದ್ಮಪ್ರಸಾದ ಅಜಿಲ

    ಬೆಳ್ತಂಗಡಿ: ತಾಲೂಕಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ತಾ.ಪಂ ನಿವೃತ್ತ ಅಧೀಕ್ಷಕ ಪ್ರಶಾಂತ್ ಬಳಂಜ ಅವರಿಂದ ಆಯೋಜಿಸಲಾದ ವಿಶಿಷ್ಟ ಕೃತಜ್ಞತಾ ಸಮಾರಂಭವು ಅರ್ಥಪೂರ್ಣವಾಗಿ ನಡೆಯಿತು. ತಮ್ಮ ದೀರ್ಘ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಭಿನ್ನವಾಗಿ…

    Spread the love

    ತೋಟಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆ ಗಿಡ ನಾಶ ಯತ್ನ; ಮಹಿಳೆ ಮೇಲೆ ದೌರ್ಜನ್ಯ – ವಕೀಲೆಯೊಬ್ಬರು ₹50 ಸಾವಿರ ವಸೂಲಿ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು

    ಬೆಳ್ತಂಗಡಿ : ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಅಡಿಕೆ ಗಿಡಗಳನ್ನು ನಾಶಪಡಿಸಲು ಯತ್ನಿಸಿದನ್ನು ಪ್ರಶ್ನಿಸಿದ್ದಕ್ಕೆಮಾನ ಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬಲ್ಲಿ ಕೇಳಿ ಬಂದಿದೆ. ಪ್ರಕರಣದ ಸಾರಾಂಶ: ದೂರುದಾರೆ ಮಹಿಳೆಗೆ ಗರ್ಡಾಡಿ ಗ್ರಾಮದಲ್ಲಿ ಗಂಡನ ಹೆಸರಿನಲ್ಲಿ…

    Spread the love

    You Missed

    “ಜೀವನದ ಮೌಲ್ಯ ವರ್ಷಗಳಲ್ಲಿ ಅಲ್ಲ, ಬದುಕಿನ ರೀತಿಯಲ್ಲಿ” – ಡಾ. ಪದ್ಮಪ್ರಸಾದ ಅಜಿಲ

    • By admin
    • April 5, 2026
    • 32 views
    “ಜೀವನದ ಮೌಲ್ಯ ವರ್ಷಗಳಲ್ಲಿ ಅಲ್ಲ, ಬದುಕಿನ ರೀತಿಯಲ್ಲಿ” – ಡಾ. ಪದ್ಮಪ್ರಸಾದ ಅಜಿಲ

    ತೋಟಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆ ಗಿಡ ನಾಶ ಯತ್ನ; ಮಹಿಳೆ ಮೇಲೆ ದೌರ್ಜನ್ಯ – ವಕೀಲೆಯೊಬ್ಬರು ₹50 ಸಾವಿರ ವಸೂಲಿ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು

    • By admin
    • April 4, 2026
    • 62 views
    ತೋಟಕ್ಕೆ ಅಕ್ರಮ ಪ್ರವೇಶಿಸಿ ಅಡಿಕೆ ಗಿಡ ನಾಶ ಯತ್ನ; ಮಹಿಳೆ ಮೇಲೆ ದೌರ್ಜನ್ಯ – ವಕೀಲೆಯೊಬ್ಬರು ₹50 ಸಾವಿರ ವಸೂಲಿ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು

    ಉಜಿರೆಯ ಹೃದಯ ಭಾಗದಲ್ಲಿ ಎಂಪಿರಿಯಾ ಕಾರ್ಪೋರೇಷನ್ ಇದರ ಜಿ-ಮಾಲ್ ಉದ್ಘಾಟನೆಗೆ ಸಜ್ಜು

    • By admin
    • April 4, 2026
    • 228 views
    ಉಜಿರೆಯ ಹೃದಯ ಭಾಗದಲ್ಲಿ ಎಂಪಿರಿಯಾ ಕಾರ್ಪೋರೇಷನ್ ಇದರ ಜಿ-ಮಾಲ್ ಉದ್ಘಾಟನೆಗೆ ಸಜ್ಜು

    ಸುವರ್ಣ ನಿಲಯ ಬಳಂಜದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ

    • By admin
    • April 4, 2026
    • 46 views
    ಸುವರ್ಣ ನಿಲಯ ಬಳಂಜದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ

    ಕಡಬ ಸಮೀಪ ಅಕ್ರಮ ಗೋಸಾಗಾಟ ತಡೆ: 19 ಗೋವುಗಳ ರಕ್ಷಣೆ

    • By admin
    • April 3, 2026
    • 40 views
    ಕಡಬ ಸಮೀಪ ಅಕ್ರಮ ಗೋಸಾಗಾಟ ತಡೆ: 19 ಗೋವುಗಳ ರಕ್ಷಣೆ

    ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಇವಿ ವಾಹನಗಳತ್ತ ರಾಜ್ಯದ ಜನರ ಓಟ, ಒಂದೇ ತಿಂಗಳಲ್ಲಿ 29 ಸಾವಿರ ಮಾರಾಟ!!!

    • By admin
    • April 3, 2026
    • 33 views
    ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಇವಿ ವಾಹನಗಳತ್ತ ರಾಜ್ಯದ ಜನರ ಓಟ, ಒಂದೇ ತಿಂಗಳಲ್ಲಿ 29 ಸಾವಿರ ಮಾರಾಟ!!!