ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ ಇದರ ವತಿಯಿಂದ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ತಾಲೂಕಿನ JSS ಕಾಲೇಜನಲ್ಲಿ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡುತ್ತಾ ಯುವಜನತೆಯಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆಯೋಜಿಸುವ ಒಂದು ಕಾರ್ಯಕ್ರಮವಾಗಿದೆ. ಇದು ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಪ್ರತಿಜ್ಞೆ ಮಾಡಿಸುವುದನ್ನು ಒಳಗೊಂಡಿರುತ್ತದೆ. ಯುವಜನರು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯುವುದು ಮತ್ತು ಆರೋಗ್ಯಕರ, ವ್ಯಸನ ಮುಕ್ತ ಜೀವನ ನಡೆಸಲು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಯುವಕ ಯುವತಿಯರು ದಾರಿ ತಪ್ಪುತ್ತಿದ್ದು ಇಂತಹ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ನೈತಿಕ ಶಿಕ್ಷಣ ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ನಾವೆಲ್ಲರೂ ದುಶ್ಚಟಗಳ ವಿರುದ್ಧ ಜಾಗೃತರಾಗಿ ದೇಶದ ಸುಭದ್ರತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಇದರಲ್ಲಿ ಯುವಜನತೆಯ ಪಾತ್ರ ಬಹುಮುಖ್ಯವಾಗಿದೆ. ಡ್ರಗ್ಸ್ ಅಫೀಮು ಗಾಂಜಾ, ಇಂತಹ ವ್ಯಸನಿಗಳಿಂದ ಯುವ ಸಮುದಾಯವನ್ನು ದೂರ ಇರುವಂತೆ ಪ್ರತಿಯೊಬ್ಬರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಬಹುಮುಖ್ಯವಾಗಿ ಪಾಲಕರು ಪೋಷಕರು ತಮ್ಮ ಮಕ್ಕಳನ್ನು ದಾರಿತಪ್ಪದಂತೆ ಕೈ ಹಿಡಿದು ಮುನ್ನಡೆಸುವ ಬಗ್ಗೆ ಮಹತ್ತರದ ಪಾತ್ರ ವಹಿಸಬೇಕು. ಮನುಷ್ಯ ತನ್ನ ಅಲ್ಪ ಸುಖಕ್ಕಾಗಿ ಬೇಡವಾದ ಯೋಚನೆಗಳ ಕಡೆ ಯೋಚಿಸಿಕೊಂಡು ಬದುಕನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬರುತ್ತಾರೆ. ಪ್ರೀತಿ ಪ್ರೇಮ ಎಂಬ ವ್ಯಾಮೋಹದ ನಡುವೆ ತಂದೆ ತಾಯಂದಿರ ಹಿತ ಕಲುಕುವ ಯುವಕರು ತಂದೆ ತಾಯಿ ಬಾಲ್ಯದಲ್ಲಿ ನಮಗಾಗಿ ಜೀವ ಸವೇದ ಕ್ಷಣವನ್ನು ಹೆಚ್ಚಾಗಿ ಆಲೋಚಿಸಿ ಮುಂದಿನ ಹೆಜ್ಜೆ ಇಡಬೇಕು. ಹೆತ್ತವರನ್ನು ಗುರುವೃಂದದವರನ್ನು ಗೌರವಿಸಿ ಮುನ್ನಡೆಯಬೇಕು, ದುಶ್ಚಟಗಳಿಂದ ಮುಕ್ತರಾಗಿ ಬದುಕಬೇಕು ಸಮಾಜದಲ್ಲಿ ಒಳ್ಳೆಯ ಆದರ್ಶ ವಿದ್ಯಾರ್ಥಿಗಳಾಗಿ ಒಳ್ಳೆಯ ವ್ಯಕ್ತಿಯಾಗಳಾಗಬೇಕು, ಮಾದಕ ದ್ರವ್ಯ ವಸ್ತುಗಳಿಂದ ದೂರವಿರಬೇಕು, ಮತ್ತು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಧುಕುಮಾರ ಹಾಗೂ ಬಾಗೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಾಮಕೃಷ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ.ಎಂ, ಒಕ್ಕೂಟದ ಅಧ್ಯಕ್ಷರಾದ ಸುಧಾ, ಶಿಕ್ಷಕರಾದ ಯೊಗೀಶ್, ಸುರೇಶ, ಹಾಗೂ ಬಾಗೆ ವಲಯದ ಮೇಲ್ವಿಚಾರಕರಾದ ಶಿವಾನಂದ ಓಂಕಾರಪ್ಪ, ಈ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು, ಸೇವಾಪ್ರತಿನಿಧಿಗಳು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Spread the love
  • Related Posts

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಮುಂಬೈ: ಐಸಿಸಿ ಟಿ–20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಮಗ್ರ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ…

    Spread the love

    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    ಬೆಳ್ತಂಗಡಿ: ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಇಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಮಹಾಸ್ವಾಮಿಗಳು ಶಾಸಕ ಹರೀಶ್…

    Spread the love

    You Missed

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    • By admin
    • March 5, 2026
    • 12 views
    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    • By admin
    • March 5, 2026
    • 37 views
    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    • By admin
    • March 5, 2026
    • 50 views
    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ, ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    • By admin
    • March 5, 2026
    • 23 views
    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ,  ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್

    • By admin
    • March 5, 2026
    • 15 views
    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್

    ಕಡಿರುದ್ಯಾವರ ಗ್ರಾಮದ ಕುಕ್ಕುದಡಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ– ಶಾಸಕ ಹರೀಶ್ ಪೂಂಜ

    • By admin
    • March 4, 2026
    • 20 views
    ಕಡಿರುದ್ಯಾವರ ಗ್ರಾಮದ ಕುಕ್ಕುದಡಿಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.1.00 ಕೋಟಿ ಅನುದಾನ– ಶಾಸಕ ಹರೀಶ್ ಪೂಂಜ