ಬೆಳಾಲು ಅಜ್ಜಿಯನ್ನು ಹತ್ಯೆಗೈದು ನಗ,ನಗದಿನೊಂದಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಅಕ್ಕು(85ವ) ಎಂಬವರನ್ನು ಸಂಬಂಧಿ ಯುವಕನೇ ಹತ್ಯೆಗೈದು ನಗ,ನಗದಿನೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.

ಹಾಡುಹಗಲೇ ವೃದ್ಧೆಯೊಬ್ಬರ ಕಿವಿ ಹರಿದು ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿದ್ದ ಆರೋಪಿಯನ್ನು ಇದೀಗ ಪೋಲೀಸರು ಬಂಧಿಸಿದ್ದಾರೆ.

READ ALSO

ಮಧ್ಯಾಹ್ನದ ವೇಳೆ ಮೃತರ ಮೊಮ್ಮಗಳು ಮನೆಗೆ ಬಂದಾಗ, ಅಜ್ಜಿ ಇಲ್ಲದನ್ನು ಗಮನಿಸಿ ಹುಡುಕಾಡಿದಾಗ, ಮನೆಯಲ್ಲಿ ಊಟದ ಬಟ್ಟಲು ಬಿದ್ದು ಎಲ್ಲಾ ಚೆಲ್ಲಾಪಿಲ್ಲಿಯಾಗಿತ್ತು, ವೃದ್ಧೆಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕಿವಿ ಹರಿದು ಹೋಗಿತ್ತು ರಕ್ತದ ಮಡುವಿನಲ್ಲಿ ಹಟ್ಟಿಯ ಬಳಿ ಬಿದ್ದಿದ್ದ ಅಜ್ಜಿಯನ್ನು ಕಂಡು ಭಯಭೀತಳಾದ ಆಕೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ.

ಸುದ್ದಿ ತಿಳಿದ ಮಗ ಸೊಸೆ ಬಂದು ನೋಡಿದಾಗ ಅಜ್ಜಿ ಅವರು ಮೃತಪಟ್ಟಿದ್ದು ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಆರೋಪಿಯನ್ನು ಗುರುತಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ ಅಶೋಕ್ ಕುಮೇರು ಎಂದು ಗುರುತಿಸಲಾಗಿದೆ.