ಶ್ರೀ ಕೃಷ್ಣ ಯೋಗಕ್ಷೇಮ (ನಿಮ್ಮ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ) ಅಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮ

ಮೈಸೂರು: ಸನ್ಮಾನ್ಯ ಶ್ರೀ ಪ್ರತಾಪ್ ಸಿಂಹ ಸಂಸದರು ಮೈಸೂರು – ಕೊಡಗು ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ  ಯೋಜನೆಯ ಮೂಲಕ ಕೊಡುಗೆಯಾಗಿ ನೀಡಿದ ಹೊಸ ಟಾಟಾ-ವಿಂಗರ್🚑 ಅಂಬುಲೆನ್ಸ್ ವಾಹನವನ್ನು ಮಾನ್ಯ ಸಂಸದರ ಪತ್ನಿ  ಡಾ.ಅರ್ಪಿತಾ ಸಿಂಹ  ರವರು ಇಂದು ಬಿಡುಗಡೆಗೊಳಿಸಿ ಹಸ್ತಾಂತರಿಸಿದರು,ಕಾರ್ಯಕ್ರಮದಲ್ಲಿ  ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ,ಮುಖ್ಯ ವೈದ್ಯಾಧಿಕಾರಿ ಡಾ ವಂದನಾ ಎಂ ಇರ್ವತ್ರಾಯ,ಪಿ ಆರ್ ಓ ಗಣೇಶ್ ಮೊದಲಾದವರಿದ್ದರು.

READ ALSO

ಶ್ರೀ ಕೃಷ್ಣ ಯೋಗಕ್ಷೇಮ ಯೋಜನೆಯು ಸುಮಾರು ಏಳು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಡಾ ಮುರಳಿಕೃಷ್ಣ ಇರ್ವತ್ರಾಯ ಇವರ ವೈದ್ಯಕೀಯ ಸೇವೆಯ ಒಂದು ಅದ್ಬುತ ಪರಿಕಲ್ಪನೆಯುಳ್ಳ ಯೋಜನೆಯಾಗಿದೆ,ಆಸ್ಪತ್ರೆಗೆ ತೆರಳಲು ಆಗದಂತಹ ಹಾಸಿಗೆ ಹಿಡಿದ ಹಳ್ಳಿ ದುರ್ಗಮ ಪ್ರದೇಶದ ರೋಗಿಗಳಿಗೆ/ಹಿರಿಯ ನಾಗರಿಕರಿಗೆ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುವುದು,ಮತ್ತು ಅವರನ್ನು ಸೂಕ್ತ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ತಲುಪಿಸುವುದು ಆಗಿದೆ. ಈ ಯೋಜನೆಗೆ ತುಳುಕೂಟ ಕುವೈತ್ ಇವರು ಪ್ರೊತ್ಸಾಹವನ್ನು ನೀಡುತ್ತಿದ್ದಾರೆ. ಸಹಾಯವಾಣಿ:9483525100