TRENDING
Next
Prev

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾಗಿ ವಸಂತ ಮರಕ್ಕಡ, ಕಾರ್ಯದರ್ಶಿಯಾಗಿ ನವೀನ್ ಬಿ.ಕೆ ಆಯ್ಕೆ

ಬೆಳ್ತಂಗಡಿ: 2023-2025 ನೇ ಸಾಲಿನ ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ ಅ.12ರಂದು ನಡೆದಿದ್ದು, ಅಧ್ಯಕ್ಷರಾಗಿ ವಸಂತ ಮರಕ್ಕಡರವರು ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಸಾದ್ ಕೆ.ಎಸ್ ಹಾಗೂ ವಸಂತ ಮರಕಡ ರವರು ಸ್ಪರ್ಧಿಸಿದ್ದು ಇದರಲ್ಲಿ ವಸಂತ ಮರಕ್ಕಡ ಗೆಲುವು ಸಾಧಿಸಿದ್ದಾರೆ.

ಕಾರ್ಯದರ್ಶಿಯಾಗಿ ನವೀನ್ ಬಿ.ಕೆ. ಆಯ್ಕೆ: ಕಾರ್ಯದರ್ಶಿ ಸ್ಥಾನಕ್ಕೆ ಹರಿಪ್ರಕಾಶ್ ಪಿ.ಎನ್ ವಿರುದ್ಧ ನವೀನ್ ಬಿ.ಕೆ ರವರು ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ್ ಕರಿಯನೆಲ ಆಯ್ಕೆ: ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶೋಕರವರು ಮುಮ್ತಾಜ್ ಬೇಗಂ ವಿರುದ್ಧ ಗೆಲುವು ಸಾಧಿಸಿದ್ದಾರೆ.

READ ALSO

ಜೊತೆ ಕಾರ್ಯದರ್ಶಿಯಾಗಿ ವಿನಯ ಕುಮಾರ್: ಜೊತೆ ಕಾರ್ಯದರ್ಶಿಯಾಗಿ ವಿನಯ್ ಕುಮಾರ್, ಎನ್ ರವರು ಸುಭಾಷಿಣಿ ಅವರ ವಿರುದ್ಧ ಗೆದ್ದು ಬೀಗಿದ್ದಾರೆ. ಖಜಾಂಚಿಯಾಗಿ ಪ್ರಶಾಂತ್ ಅವರು ಅವಿರೋಧವಾಗಿ ಆಯ್ಕೆ ಗೊಂಡಿರುತ್ತಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನೇಶ್ ಶೆಟ್ಟಿ, ಧನಂಜಯ ಕುಮಾರ್, ಚಿದಾನಂದ, ಉಮೇಶ್, ಪ್ರವೀಣ್ ಕುಮಾರ್, ಶ್ರೀಮತಿ ಸುಜಾತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೀನಿಯರ್ ಕಮಿಟಿ ಚೇರ್ ಮನ್ ಆಗಿ ಅಲೋಶಿಯಸ್ಲೋಬೋ ನೇಮಕ. ಸದಸ್ಯರಾಗಿ ಶಶಿಕಿರಣ್ ಜೈನ್, ಸ್ವರ್ಣಲತಾರವರನ್ನು ವಕೀಲರ ಸಂಘದ ಪದಾಧಿಕಾರಿಗಳು ನೇಮಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಕೇಶವ ಬೆಳಾಲ್ ಭಾಗವಹಿಸಿದ್ದರು. ಹಾಗೂ ಉದಯ್ ಬಿಕೆ ಸಹಕರಿಸಿದರು.