
ಉಜಿರೆ: ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ವರ್ಷದ ಲಾಂಛನವನ್ನು ಆಸ್ಪತ್ರೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು.
ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸೇವೆಯನ್ನು ನೀಡುತ್ತಾ ಬೆಳೆದ ಬೆನಕ ಆಸ್ಪತ್ರೆ ಇನ್ನಷ್ಟು ಬೆಳೆದು ಜನಹಿತ ಕೆಲಸ ಮಾಡುವಂತಾಗಲಿ ರಜತಸಂಭ್ರಮ ಲಾಂಛನವು ಬೆನಕ ಆಸ್ಪತ್ರೆಯ ನಿಷ್ಕಲ್ಮಶ, ಗುಣಮಟ್ಟದ ಹಾಗೂ ನಗುಮುಖದ ಸೇವೆಯ ಪ್ರತೀಕ ಇನ್ನಷ್ಟು ಜನಹಿತ ಸಂತೃಪ್ತ ಸೇವೆಯನ್ನು ಸಮರ್ಪಣಾಭಾವದಿಂದ ಒದಗಿಸುವಲ್ಲಿ ಈ ಲಾಂಛನ ಪ್ರೇರಣೆಯಾಗಲಿ ಎಂದು ಸೀತಾರಾಮ ಭಟ್ ಶುಭಹಾರೈಸಿದರು.
ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಗೋಪಾಲಕೃಷ್ಣ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಇಪ್ಪತೈದು ವರ್ಷಗಳ ಹಿಂದೆ ಸಾಮಾನ್ಯ ಖಾಯಿಲೆಗಳಿಗೆ ಒಳರೋಗಿ ಚಿಕಿತ್ಸೆ ಪಡೆಯಲು ದೂರದ ಪಟ್ಟಣಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಅಂದಿನ ಅಗತ್ಯವನ್ನು ಮನಗೊಂಡು ಆರಂಭವಾದ ಕೇವಲ ಹತ್ತು ಹಾಸಿಗೆಗಳ ಆಸ್ಪತ್ರೆ ಇಂದು ಸುಸಜ್ಜಿತ ನೂರು ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಆಧುನಿಕ ಸೌಲಭ್ಯಗಳು, ಗುಣಮಟ್ಟದ ಸೇವೆ, ಸೇವಾ ಮನೋಭಾವದ ಸಿಬ್ಬಂದಿ ಹಾಗೂ ನಮ್ಮ ಮೇಲೆ ಸಾರ್ವಜನಿಕರ ವಿಶ್ವಾಸದಿಂದಾಗಿ ನಮ್ಮ ಸಂಸ್ಥೆ ಬೆಳೆದು ನಿಂತಿದೆ ಎಂದರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಜಿ ಭಟ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯ ವಂದಿಸಿದ ಕಾರ್ಯಕ್ರಮದಲ್ಲಿ ಡಾ.ಭಾರತಿ, ಡಾ.ಆದಿತ್ಯ ಡಾ. ಅಂಕಿತಾ ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.