ಬಿಗ್​​ಬಾಸ್​ ಸೀಸನ್ 8ರ ದೊಡ್ಮನೇಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ಬಿಗ್​ಬಾಸ್​ ಸೀಸನ್​ 8ರಲ್ಲಿ ಅತಿ ಹೆಚ್ಚು ಟಾಕ್​ ಆಗುತ್ತಿರುವುದು ದಿವ್ಯಾ ಉರುಡುಗ ಬಗ್ಗೆ. ಯಾವುದೇ ವಿಚಾರದಲ್ಲಾದರೂ ಬಿಗ್​ಬಾಸ್​​ ಮನೆಯೊಳಗೆ ಸದಾ ಸುದ್ದಿಯಲ್ಲಿರುವ ಇವರು ಈ ವಾರ ಕ್ಯಾಪ್ಟನ್ಸಿಗಾಗಿ ಸಖತ್ ಆಗಿ ಟಾಸ್ಕ್​​ ನಿರ್ವಹಣೆ ಮಾಡಿದ್ದಾರೆ. ಈ ಮೂಲಕ ಪ್ರಸಕ್ತ ಆವೃತ್ತಿಯ ಮೊದಲ ಮಹಿಳಾ ಕ್ಯಾಪ್ಟನ್​ ಆಗಿಯೂ ಹೊರಹೊಮ್ಮಿದರು.

Bigg boss kannada divya uruduga creates history in kannada bigg boss-8
ದಿವ್ಯಾ ಉರುಡುಗ

ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಎರಡನೇ ವಾರವನ್ನು ಪೂರ್ಣಗೊಳಿಸಿದ್ದು, ಮೂರನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಕಾರ್ಯಕ್ರಮ ಕುತೂಹಲ ಕೆರಳಿಸುತ್ತಾ ಸಾಗಿದೆ. ಸೂರ್ಯಸೇನೆ ಹಾಗೂ ಕ್ವಾಟ್ಲೆ ಕಿಲಾಡಿಗಳು ತಂಡಗಳು ಕ್ಯಾಪ್ಟನ್ಸಿಗಾಗಿ ಸತತ ಮೂರು ದಿನಗಳ ಕಾಲ ಟಾಸ್ಕ್‌ಗಳನ್ನು ಆಡಿದ್ದರು. ಸೂರ್ಯಸೇನೆ ತಂಡದಲ್ಲಿ ದಿವ್ಯಾ ಉರುಡುಗ ಹಾಗೂ ವೈಷ್ಣವಿ ಇದ್ದರು.

Bigg boss kannada divya uruduga creates history in kannada bigg boss-8
ದಿವ್ಯಾ ಉರುಡುಗ

ಈ ಬಾರಿ ಕ್ಯಾಪ್ಟನ್ಸಿಗಾಗಿ ಬಿಗ್​ಬಾಸ್ ನೀಡಿದ ಟಾಸ್ಕ್‌ ವಿಶೇಷವಾಗಿತ್ತು. ಸೂರ್ಯ ಸೇನೆ ತಂಡದ ಆರು ಮಂದಿ ಸದಸ್ಯರಿಗೆ ಸೂಚಿಸಿದ ಸಮಯದೊಳಗೆ ಅತಿ ಹೆಚ್ಚು ಬಟ್ಟೆಗಳನ್ನು ತೊಡಬೇಕಾಗಿತ್ತು. ಅದರಲ್ಲಿ 81 ಬಟ್ಟೆಗಳನ್ನು ತೊಟ್ಟುಕೊಳ್ಳುವ ಮೂಲಕ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ದಿವ್ಯಾ ಉರುಡುಗ ಪಡೆದರು. ಈ ಮೂಲಕ ಈ ವಾರದ ಕ್ಯಾಪ್ಟನ್ಸ್ ಆಗಿ ಅವರು ಆಯ್ಕೆಯಾದರು.

Bigg boss kannada divya uruduga creates history in kannada bigg boss-8
ದಿವ್ಯಾ ಉರುಡುಗ

‘ನನಗೆ ಮೊದಲಿನಿಂದಲೂ ಮೊದಲ ಮಹಿಳಾ ಕ್ಯಾಪ್ಟನ್ ಆಗಬೇಕು ಎಂದು ಆಸೆ ಇತ್ತು. ಕ್ಯಾಪ್ಟನ್ ಆಗೋಕೆ ಮನೆಯ ಎಲ್ಲ ಮಹಿಳಾ ಸ್ಪರ್ಧಿಗಳು ಕಾರಣ. ಪ್ರತಿಯೊಬ್ಬರಿಗೂ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ ಮಹಿಳಾ ಸ್ಪರ್ಧಿಗಳೇ ನನಗೆ ಹೆಚ್ಚು ಸಹಕಾರ ನೀಡಿದರು’ ಎಂದು ಹೇಳಿ ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಅರ್ಪಿಸಿದರು.

ಬಳಿಕ ಅತ್ಯುತ್ತಮ ಹಾಗೂ ಕಳಪೆ ಪ್ರದರ್ಶನಕ್ಕಾಗಿ ವೋಟ್ ನಡೆಯಿತು. ಶುಭ ಪೂಂಜಾ ಅವರನ್ನು ಕಳಪೆ, ರಘು ಅವರನ್ನು ಅತ್ಯುತ್ತಮ ಎಂದು ಆಯ್ಕೆ ಮಾಡಲಾಯಿತು.

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 87 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 49 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 53 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 136 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 75 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ

    • By admin
    • December 10, 2024
    • 86 views
    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ