ಬಿಗ್ ಬಾಸ್ ಕನ್ನಡದ ಸೀಸನ್ 11ರಲ್ಲಿ ಗೆದ್ದು ಬೀಗಿದ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿಸೊಗಡಿನ ಹನುಮಂತ ಹೊರಹೊಮ್ಮಿದ್ದಾರೆ.ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ ಬಿಗ್ ಬಾಸ್ ಕಿರೀಟ ತನ್ನ ಮುಡಿಗೇರಿಸಿಕೊಂಡಿದ್ದಾರೆ.

ತ್ರಿವಿಕ್ರಮ್ ಮತ್ತು ರಜತ್‌ ಅವರಿಗೆ ಟಕ್ಕರ್‌ ಕೊಟ್ಟು ಈ ಸೀಸನ್‌ನ ವಿನ್ನರ್ ಆಗಿದ್ದಾರೆ. ಟ್ರೂಫಿ ಜೊತೆಗೆ 50 ಲಕ್ಷ ರೂ ನಗದು ಬಹುಮಾನ ಕೂಡ ಗೆದ್ದಿದ್ದಾರೆ. ಇನ್ನು ತ್ರಿವಿಕ್ರಮ್‌ ಅವರು ರನ್ನರ್ ಅಪ್‌ ಆಗಿ ಒಟ್ಟು 15 ಲಕ್ಷ ರೂ ನಗದು ಬಹುಮಾನ ಗೆದ್ದರು.

ರಜತ್‌ ಕಿಶನ್‌ ಅವರು ಎರಡನೇ ರನ್ನರ್ ಅಪ್ ಆದರು. ಜತೆಗೆ 10 ಲಕ್ಷ ರೂ ನಗದು ಬಹುಮಾನ ಗೆದ್ದರು. ಮನೆಯಲ್ಲಿ ಕೊನೆಯದಾಗಿ ಉಳಿದಿದ್ದ ಮೂವರನ್ನು ಸುದೀಪ್‌ ಅವರೇ ಸ್ವತಃ ಮನೆಯೊಳಗೆ ಹೋಗಿ ಕರೆದುಕೊಂಡು ವೇದಿಕೆಗೆ ಬಂದರು.ದೊಡ್ಡ ಆಲದಮರದ ಬಳಿಯ ಹೊಸ ಅರಮನೆಯಂಥ ಬಿಗ್ ಬಾಸ್ ಮನೆ ಆವರಣದಲ್ಲಿ ಈ ಈವೆಂಟ್ ನಡೆದಿದೆ. ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ವಿನ್ನರ್‌ ಹನುಮಂತಗೆ ಟ್ರೋಫಿ ಮತ್ತು ಬಹುಮಾನದ ಮೊತ್ತದ ಚೆಕ್ ಹಸ್ತಾಂತರಿಸಿದರು.

ಇನ್ನು ಶೋ ಗೆದ್ದ ಹನುಮಂತ ಬಿಗ್‌ಬಾಸ್‌ ಟ್ರೋಪಿ ಜೊತೆಗೆ 50 ಲಕ್ಷ ಮಾತ್ರವಲ್ಲ, ಮನೆಯಲ್ಲಿ ಇಷ್ಟು ದಿನ ಉಳಿದುಕೊಂಡ ಹಿನ್ನೆಲೆಯಲ್ಲಿ ಸಂಭಾವನೆಯನ್ನು ಕೂಡ ಪಡೆದಿದ್ದಾರೆ.ಕಪ್ ಯಾರು ಗೆಲ್ಲುತ್ತಾರೆ, 50 ಲಕ್ಷ ರೂಪಾಯಿ ಹಣವನ್ನು ಯಾರು ತೆಗೆದುಕೊಂಡು ಹೋಗುತ್ತಾರೆ ಎಂಬ ಬಗ್ಗೆ ಚರ್ಚೆ ಜೋರಾಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿಗಳು ಕೂಡ ಹರಡಿತ್ತು. ಹನುಮಂತ ಅವರು ವಿನ್ನರ್ ಎಂದು ಅವರ ಅಭಿಮಾನಿಗಳು ಹೇಳುತ್ತಲೇ ಇದ್ದರು. ಈ ಮಧ್ಯೆ ಹನುಮಂತ ಅವರು ಬಿಗ್ ಬಾಸ್ ವಿನ್ನರ್ ಎಂದು ವಿಕಿಪೀಡಿಯಾದಲ್ಲೂ ಮಾಹಿತಿ ಅಪ್ಡೇಟ್ ಮಾಡಲಾಗಿತ್ತು. ಘೋಷಣೆಗೂ‌ ಮೊದಲೇ ಸೋರಿಕೆಯಾಗಿದ್ದ ಮಾಹಿತಿ ಕೊನೆಗೂ ನಿಜವಾಗಿದೆ.

ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದು ಫಿನಾಲೆಯಲ್ಲಿ 2 ಮತ್ತು ಮೂರನೇ ಸ್ಥಾನ ಪಡೆದು ಹನುಮ ಮತ್ತು ರಜತ್‌ ಇತಿಹಾಸ ನಿರ್ಮಿಸಿದ್ದಾರೆ. ಈವರೆಗೆ ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲಿ ಯಾವೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಕೂಡ ಫಿನಾಲೆ ವಾರದವರೆಗೆ ಬಂದಿರುವ ಇತಿಹಾಸವೇ ಇಲ್ಲ. ಶೋ ಆರಂಭವಾಗುವಾಗ ಇಬ್ಬರಿಗೂ ಕಿಚ್ಚ ಸುದೀಪ್‌ ಇದನ್ನು ಹೇಳಿ ಅಭಿನಂದನೆ ಕೂಡ ಸಲ್ಲಿಸಿದ್ದರು.

ಉಗ್ರಂ ಮಂಜು, ರಜತ್‌, ತ್ರಿವಿಕ್ರಮ್‌ ಅವರಿಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟ್‌ಗಳಲ್ಲಿ ಹನುಮಂತ ಠಕ್ಕರ್ ಕೊಟ್ಟಿದ್ದರು. ಜೊತೆಗೆ ಧನ್‌ರಾಜ್ ಅವರೊಂದಿಗಿನ ಸ್ನೇಹ ಕೂಡ ತುಂಬಾ ಹೈಲೆಟ್ಸ್ ಆಗಿತ್ತು. ಬಿಗ್‌ಬಾಸ್‌ ಪಿನಾಲೆಗೆ ಒಟ್ಟು 6 ಮಂದಿ ಸೆಲೆಕ್ಟ್ ಆಗಿದ್ದರು. ಅದರಂತೆ ಕ್ರಮವಾಗಿ ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ, ರಜತ್‌ ಮತ್ತು ತ್ರಿವಿಕ್ರಮ್‌ ಕಪ್‌ ಗೆಲ್ಲುವ ರೇಸ್‌ ನಿಂದ ಹೊರಬಿದ್ದರು.

ಒಟ್ಟು ಈ ಬಾರಿ 20 ಮಂದಿ ಸ್ಪರ್ಧಿಗಳು ಶೋನಲ್ಲಿದ್ದರು.ಇದೀಗ ಬಿಗ್ ಬಾಸ್ ಕನ್ನಡ 11ರ ಸೀಸನ್ ಗ್ರಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿ ಹನುಮಂತ ಅವರು ಕಪ್ ಗೆಲ್ಲುವ ಮೂಲಕ ಬಿಗ್ ಬಾಸ್ ಈ ಸೀಸನ್‌ಗೆ ಇತಿಶ್ರೀ ಹಾಡಲಾಯಿತು.

Spread the love
  • Related Posts

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರವು ರಾಜ್ಯದ ವಿವಿಧ ಭಾಗಗಳಲ್ಲಿ ನೂತನ 12 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಸಾರ್ವಜನಿಕರ ಭದ್ರತೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಸೇವೆಗಳನ್ನು ಜನರಿಗೆ ಇನ್ನಷ್ಟು ಸಮೀಪಕ್ಕೆ ತಲುಪಿಸಲು ಈ ಕ್ರಮ…

    Spread the love

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಮುಂಬೈ: ಐಸಿಸಿ ಟಿ–20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಮಗ್ರ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ…

    Spread the love

    You Missed

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    • By admin
    • March 6, 2026
    • 8 views
    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    • By admin
    • March 5, 2026
    • 14 views
    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    • By admin
    • March 5, 2026
    • 39 views
    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    • By admin
    • March 5, 2026
    • 52 views
    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ, ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    • By admin
    • March 5, 2026
    • 23 views
    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ,  ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್

    • By admin
    • March 5, 2026
    • 17 views
    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್