ಬೆಂಗಳೂರು: ಈಶಾನ್ಯ ವಲಯ ಮತ್ತು ಬೆಂಗಳೂರು ವಲಯದ ಶಿಕ್ಷಕರ ಕ್ಷೇತ್ರಗಳು ಹಾಗೂ ಪಶ್ಚಿಮ ವಲಯ ಮತ್ತು ಆಗ್ನೇಯ ವಲಯ ಪದವೀಧರರ ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರಕ್ಕೆ ಶಶೀಲ್ ನಮೋಶಿ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಎಸ್.ವಿ. ಸಂಕನೂರ್ ಮತ್ತು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚಿದಾನಂದ ಗೌಡ ಅವರನ್ನ ಅಭ್ಯರ್ಥಿಗಳನ್ನಾಗಿ ಬಿಜೆಪಿ ಆಯ್ಕೆ ಮಾಡಿದೆ.