ಬೆಳ್ತಂಗಡಿ : ಪಾಪಿ ಮಗನೊಬ್ಬ ತಂದೆಯನ್ನೇ ಬಡಿಗೆಯಿಂದ ತಲೆಗೆ ಬಡಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯಲ್ಲಿ ಇಂದು ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಈ ಘಟನೆ ಸಂಭವಿಸಿದ್ದು ಹತ್ಯೆಯಾದ ವ್ಯಕ್ತಿಯನ್ನು ಶ್ರೀಧರ್(56) ಎಂದು ಗುರುತಿಸಲಾಗಿದೆ.
ತಂದೆಯನ್ನು ಕೊಲೆ ಮಾಡಿದವನು ಮಗನೇ ಎಂದು ಹೇಳಲಾಗಿದ್ದು, ಮಗನನ್ನು ಹರೀಶ (29) ಎಂದು ಗುರುತಿಸಲಾಗಿದೆ.
ಮೃತಪಟ್ಟ ಶ್ರೀಧರಿಗೆ ಇಬ್ಬರು ಗಂಡು, ಒಬ್ಬಳು ಹೆಣ್ಣು ಮಕ್ಕಳಿದ್ದು ಹರೀಶ ಎಂಬ ಒಬ್ಬ ಮಗನೇ ತಂದೆಯನ್ನು ಕೊಲೆ ಮಾಡಿದ ಪಾತಕಿಯಾಗಿದ್ದು ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೋಲಿಸರು ಬೇಟಿ ನೀಡಿ ಆರೋಪಿ ಹರೀಶನನ್ನು ಬಂಧಿಸಿ ತನಿಖೆ ನಡೆಸುತಿದ್ದಾರೆ.