TRENDING
Next
Prev

ಬೆಳ್ತಂಗಡಿಯ ಕಾನರ್ಪ ನಿವಾಸಿ ನಿವೃತ್ತ ಯೋಧ ಮಂಜೇಶ್ವರದಲ್ಲಿ ರಸ್ತೆ ಅಪಘಾತದಲ್ಲಿ ದುರ್ಮರಣ

ಮಂಗಳೂರು: ಲಾರಿಯೊಂದು ಸ್ಕೂಟರಿನಲ್ಲಿ ತೆರಳುತ್ತಿದ್ದ ನಿವೃತ್ತ ಯೋಧರಿಗೆ ಅಪಘಾತ ನಡೆಸಿ ಪರಾರಿಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ ಅಪಘಾತದ ತೀವ್ರತೆಗೆ ನಿವೃತ ಯೋಧ ಸ್ಥಳದಲ್ಲೇ ಸಾವೀಗಿಡಾದ ಬಗ್ಗೆ ವರದಿಯಾಗಿದೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿಯಾಗಿರುವ, ಪ್ರಸ್ತುತ ಕಾಸರಗೋಡು ಜಿಲ್ಲೆಯ  ಮಂಜೇಶ್ವರ ಉದ್ಯಾವರ ಗುತ್ತು ನಿವಾಸಿ ನಿವೃತ್ತ ಸೈನಿಕರಾಗಿರುವ ದಿನೇಶ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.

READ ALSO

ಇವರ ಪತ್ನಿ ಮನೆ ಕೇರಳ ರಾಜ್ಯದ ಮಂಜೇಶ್ವರದಲ್ಲಿದ್ದು, ಅಲ್ಲಿ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೊತೆ ವಾಸವಾಗಿದ್ದರು.

ನಿವೃತ್ತಿಯ ಬಳಿಕ ಮಂಗಳೂರಿನ ಮಂಗಳೂರಿನ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದು ಬೆಳಗ್ಗೆ ಎಂದಿನಂತೆ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಕೇರಳ ಭಾಗದಿಂದ ಆಗಮಿಸಿದ ಲಾರಿಯೊಂದು ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಡಿಕ್ಕಿ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಇವರ ದೇಹದ ಮೇಲೆಯೇ ಲಾರಿಯ ಸಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧಪಟ್ಟಂತೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.