ಬೆಳ್ತಂಗಡಿ ತಾಲೂಕಿನ ಗ್ರಾಮ ಗ್ರಾಮಗಳ ಅಭಿವೃದ್ಧಿಯ ಅಲೆಯಲ್ಲಿ ಕೊಚ್ಚಿ ಹೋದ ವಿ.ಪಕ್ಷಗಳ ನೆಲೆ ವೇಣೂರು ಗ್ರಾ.ಪಂ ಬಿ.ಜೆ.ಪಿ ತೆಕ್ಕೆಗೆ

ವೇಣೂರು: ವೇಣೂರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ 24 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 24 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದಾರೆ.

ವೇಣೂರು ಗ್ರಾಮ ಪಂಚಾಯತಿಯ 24 ಸ್ಥ್ಥಾನಗಳಿಗೆ ಬಿಜೆಪಿ ಬೆಂಬಲಿತ 24ಮಂದಿ ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ 24 ಮಂದಿ ಅಭ್ಯರ್ಥಿಗಳು ಹಾಗೂ ಎಸ್.ಡಿ.ಪಿ.ಐ ಪಕ್ಷ ಬೆಂಬಲಿತರಾಗಿ 3ಮಂದಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 51 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

READ ALSO

ವೇಣೂರು 1 ಮತ್ತು 2ನೇ ವಾರ್ಡ್, ಬಜಿರೆ 1 ಮತ್ತು 2ನೇ ಕ್ಷೇತ್ರ, ಕರಿಮಣೇಲು 1ಮತ್ತು 2ನೇ ಕ್ಷೇತ್ರ ಹಾಗೂ ಮೂಡುಕೋಡಿ 1 ಮತ್ತು 2ನೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕ ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಬೆಳ್ತಂಗಡಿಯಲ್ಲಿ ಅಭಿವೃದ್ಧಿಯ ಅಲೆ ಬೀಸಿದಂತಾಗಿದೆ.