ನವದೆಹಲಿ: ಹೊಸ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಎಪ್ರಿಲ್ 1, 2021ರಿಂದ ಆರಂಭಗೊಳ್ಳುತ್ತಿರುವ ಹೊಸ ಆರ್ಥಿಕ ವರ್ಷದಲ್ಲಿ ಉಳಿತಾಯ, ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
2021 ರ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ1 ವರ್ಷದ ಠೇವಣಿ ಉಳಿತಾಯಕ್ಕೆ ಶೇಕಡಾ 4 ರಷ್ಟಿದ್ದ ಬಡ್ಡಿದರವನ್ನು ಇದೀಗ 3.5ಕ್ಕೆ ಇಳಿಸಲಾಗಿದೆ. 2 ವರ್ಷದ ಅವಧಿಯ ಉಳಿತಾಯದ ಮೇಲಿನ ಬಡ್ಡಿಯನ್ನು ಶೇಕಡಾ 5.5 ರಿಂದ ಶೇಕಾಡ 4.4ಕ್ಕೆ ಇಳಿಸಲಾಗಿದೆ.
3, 5 ವರ್ಷದ ಉಳಿಯಾ, RD ಸ್ಕೀಮ್, ಹಿರಿಯ ನಾಗರೀಕರ ಉಳಿತಾಯ, ಮಾಸಿಕ ಆದಾಯ ಖಾತೆ, ರಾಷ್ಟ್ರೀಯ ಉಳಿತಾಯ ಪತ್ರ, ಪಬ್ಲಿಕ್ ಪ್ರೊವಿಡೆಂಟ್ ಫಂಡ್(PPF), ಕಿಸಾನ್ ವಿಕಾಸ್ ಪತ್ರ ಹಾಗೂ ಸುಕನ್ಯ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿದೆ