ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ ಗಣೇಶ್ ಶಿರ್ಲಾಲು, ಜತೆ ಕಾರ್ಯದರ್ಶಿಯಾಗಿ ವಿಜಯವಾಣಿ ವರದಿಗಾರ ಮನೋಹರ ಬಳಂಜ, ಕೋಶಾಧಿಕಾರಿಯಾಗಿ ಸಂಯುಕ್ತ ಕರ್ನಾಟಕದ ವರದಿಗಾರ ಪುಷ್ಪರಾಜ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಪ್ರಜಾವಾಣಿ ಹಿರಿಯ ವರದಿಗಾರ ಆರ್.ಎನ್.ಪೂವಣಿ ಚುನಾವಣಾಧಿಕಾರಿಯಾಗಿದ್ದರು. ಜಿಲ್ಲಾ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ನೂತನ ಸದಸ್ಯರಿಗೆ ನಿರ್ಣಯ ಪುಸ್ತಕ ನೀಡಿ ಶುಭ ಹಾರೈಸಿದರು.

ಸದಸ್ಯರಾದ ಬಿ.ಎಸ್.ಕುಲಾಲ್, ದೇವಿಪ್ರಸಾದ್, ಶ್ರೀನಿವಾಸ ತಂತ್ರಿ, ಮಂಜುನಾಥ ರೈ, ದೀಪಕ ಆಠವಳೆ, ಅಚುಶ್ರೀ ಬಾಂಗೇರು, ಜಾರಪ್ಪ ಪೂಜಾರಿ, ಹೃಷಿಕೇಶ್ ಧರ್ಮಸ್ಥಳ, ಪ್ರಸಾದ ಶೆಟ್ಟಿ ಏಣಿಂಜೆ, ಸಂತೋಷ್ ಕೋಟ್ಯಾನ್, ತುಕಾರಾಮ, ಅರವಿಂದ ಹೆಬ್ಬಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿ ಅನುಮೋದಿಸಲಾಯಿತು.

Spread the love
  • Related Posts

    ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯ ಆಚರಣೆಗಳ ಮಹತ್ವ

    ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ…

    Spread the love

    ಯುವಜನತೆ ಸಂಸ್ಕಾರ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಭವ್ಯ ಭಾರತದ ನಿರ್ಮಾಣದಲ್ಲಿ ಪಾಲ್ಗೋಳ್ಳಿ: ಸುರೇಶ್ ಪರ್ಕಳ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪದಲ್ಲಿ ಚಿರಂಜೀವಿ ಯುವಕ ಮಂಡಲ (ರಿ) ಕಾನರ್ಪ ಕಡಿರುದ್ಯಾವರ, ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ, ಚಿರಂಜೀವಿ ಉತ್ಸವ ಆಚರಣಾ ಸಮಿತಿ ಕಾನರ್ಪ ಕಡಿರುದ್ಯಾವರ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಚಿರಂಜೀವಿ ಉತ್ಸವ 2023 ಕಾರ್ಯಕ್ರಮವನ್ನು…

    Spread the love

    You Missed

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    • By admin
    • April 23, 2025
    • 83 views
    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    • By admin
    • April 20, 2025
    • 46 views
    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    • By admin
    • April 19, 2025
    • 175 views
    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    • By admin
    • April 18, 2025
    • 184 views
    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    • By admin
    • April 9, 2025
    • 88 views
    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ

    • By admin
    • April 8, 2025
    • 107 views
    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ