
ಬೆಳ್ತಂಗಡಿ: ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ಬೆಳ್ತಂಗಡಿ ತಾಲೂಕು ಪ್ರಿಂಟರ್ಸ್ ಅಶೋಸಿಯೇಷನ್ ನ ಜತೆಕಾರ್ಯದರ್ಶಿ ನಾರಾಯಣ್ ಶೆಟ್ಟಿ ( ನಿಸರ್ಗ ಪ್ರಿಂಟರ್ಸ್ ಸೋಮಂತಡ್ಕ ) ಇವರಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು ಒದಗಿಲಾಯಿತು.. ಮೂಡಬಿದ್ರೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀರ್ವ ಗಾಯಗೊಂಡು ಮಂಗಳೂರಿನ ಎ. ಜೆ. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿ ಪ್ರಸ್ತುತ ಮೂಡಬಿದ್ರೆ ಮಿಜಾರಿನಲ್ಲಿ ಶುಶ್ರೂಷೆ ಪಡೆಯುತ್ತಿರುವ ನಾರಾಯಣ್ ಶೆಟ್ಟಿ (ನಿಸರ್ಗ ಪ್ರಿಂಟರ್ಸ್)ಇವರಲ್ಲಿಗೆ ತೆರಳಿ ಸಹಾಯಧನ ನೀಡಲಾಯಿತು. ಈ ಸಂಧರ್ಭದಲ್ಲಿ ಅಶೋಸಿಯೇಶನ್ ಅಧ್ಯಕ್ಷರಾದ ವಸಂತ ಶೆಟ್ಟಿ ಶ್ರದ್ಧಾ, ಕೋಶಾಧಿಕಾರಿ ಬಾಲಕೃಷ್ಣ(ಅನುಪಮ ಪ್ರಿಂಟರ್ಸ್ ), ಉಪಾಧ್ಯಕ್ಷರಾದ ಅನಿಲ್ (ಅಕ್ಷರ ಪ್ರಿಂಟರ್ಸ್ ), ಜೋಬಿನ್ (ಪ್ರಿಂಟ್ ಪ್ಯಾಲೇಸ್ ) ಉಪಸ್ಥಿತರಿದ್ದರು. ಅಶೋಸಿಯೇಶನ್ ಕಾರ್ಯದರ್ಶಿ ಅರ್ಪಣ್ ( ಪೂಂಜಶ್ರೀ ಪ್ರಿಂಟರ್ಸ್ ), ಉಪಾಧ್ಯಕ್ಷರಾದ ಸುದತ್ ಜೈನ್ (ಪಾರ್ಶ್ವನಾಥ್ ಪ್ರಿಂಟರ್ಸ್) ಹಿರಿಯ ಸಲಹೆಗಾರ ಶೇಖರ್ (ಮಂಜುಶ್ರೀ ಪ್ರಿಂಟರ್ಸ್ ), ಹಿರಿಯ ಸದಸ್ಯರಾದ ರತ್ನವರ್ಮ ಜೈನ್ (ರತ್ನಗಿರಿ ಪ್ರಿಂಟರ್ಸ್ ), ಸದಸ್ಯರುಗಳಾದ ರಾಮಕೃಷ್ಣ (ರಂಗೋಲಿ ಪ್ರಿಂಟರ್ಸ್ ), ಆಕಾಶ್ ( ಪೂಂಜಶ್ರೀ ಫ್ಲೆಕ್ಸ್ )ಪ್ರಸಾದ್ ಮಧುರ ಪ್ರಿಂಟರ್ಸ್ ಸಹಕರಿಸಿದರು.