
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಉಜಿರೆ ಇದರ ಚುನಾಯಿತ ಆಡಳಿತ ಮಂಡಳಿಯ ನಿರ್ದೇಶಕರ ಸಭೆ ಇಂದು ನಡೆಯಿತು.
ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶ್ರೀಧರ ಜಿ ಭಿಡೆ ಉಪಾಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿ ಬೆಳ್ತಂಗಡಿ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಸಹಕರಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪದ್ಮನಾಭ ಎನ್, ಇಚ್ಚಿಲ ಸುಂದರ ಗೌಡ, ಹೆಚ್. ಹೆಚ್.ಪದ್ಮಗೌಡ, ಗ್ರೇಸಿಯನ್ ವೇಗಸ್, ಸೋಮನಾಥ ಬಂಗೇರ ವರ್ಪಾಳೆ, ಕೆ.ಜೆ ಆಗಸ್ಟಿನ್, ಬಾಲಕೃಷ್ಣ ಗೌಡ ಕೆ., ಡಾ| ಶಶಿಧರ ಡೋಂಗ್ರೆ, ಜಯಶ್ರೀ ಡಿ.ಎಂ, ವಿ.ವಿ ಅಬ್ರಾಹಂ, ಕೆ. ರಾಮ ನಾಯ್ಕ, ಬೈರಪ್ಪ, ಸೀತಾರತ್ನ ಉಪಸ್ಥಿತರಿದ್ದರು.