ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ಚಾರ್ಮಾಡಿ-ಕಕ್ಕಿಂಜೆ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ತೋಟತ್ತಾಡಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ತೋಟತ್ತಾಡಿಯ ಬಡ ಕುಟುಂಬವೊಂದಕ್ಕೆ ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಿಸಿ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ರೋಟರಿ ಸಂಸ್ಥೆಯನ್ನು ಎಷ್ಟು ಹತ್ತಿರವಾಗಿ ನಾವು ನೋಡುತ್ತೇವೋ ಅಷ್ಟೆ ವಿಸ್ತಾರವಾದ ಸೇವೆಯನ್ನು ಮಾಡುತ್ತಾ ಬರುತ್ತಿರುವುದು ಕಾಣುತ್ತದೆ. ಕಷ್ಟದಲ್ಲಿರುವವರಿಗೆ ಸಮಾಜದ ಬೆಳಕು ಕಾಣುವಂತಹ ಕೆಲಸ ಮಾಡುವುದೇ ಸಮಾಜಕ್ಕೆ ಬೇಕಾದಂತಹ ಸಮಾಜಮುಖಿ ಚಟುವಟಿಕೆ ಕೆಲಸ ಒಂದು ಕಡೆಯಾದರೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಬಗ್ಗೆ ಮಾತನಾಡುವಾಗಲೂ ಹೊರಗೆ ನಿಂತವರಿಗೆ ಈ ಸಂಘಟನೆಗಳ ಒಟ್ಟಿಗೆ ಸಂಪರ್ಕಕ್ಕೆ ಬಂದಾಗ ದೇಶ್ಯಾದಂತ ಈ ರೀತಿಯಲ್ಲಿ ಪ್ರತಿ ಗ್ರಾಮ ಗ್ರಾಮಗಳಲ್ಲಿ ಚಟುವಟಿಕೆಗಳ ಮಾಡುವಂತಹ ಸಂಸ್ಕಾರವನ್ನು ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವಂತಹ ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುವಂತಹ ಸಂಘಟನೆ ಅದೂ ಕೂಡ. ಇಂತಹ ಸಂಘಟನೆಗಳಿಗೆ ಇನ್ನಷ್ಟು ಕೆಲಸ ಮಾಡುವ ಶಕ್ತಿ ಭಗವಂತ ನೀಡಲಿ. ಅದೇ ರೀತಿ ಈ ಕುಟುಂಬಕ್ಕೆ ಕಷ್ಟದಿಂದ ಹೊರ ಬರುವ ದಾರಿ ತೋರಿಸಲಿ ಎಂದು ಪ್ರಾರ್ಥಿಸುವ ಎಂದರು.
ಅಧ್ಯಕ್ಷತೆಯನ್ನು ತೋಟತ್ತಾಡಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಘಟಕದ ಅಧ್ಯಕ್ಷ ಜಯಾನಂದ ಡಿ. ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಧನಂಜಯ ರಾವ್, ಚಾರ್ಮಾಡಿ-ಕಕ್ಕಿಂಜೆ
ರೋಟರಿ ಸಮುದಾಯ ದಳದ ಅಧ್ಯಕ್ಷ ಓಬಯ್ಯ ಗೌಡ, ಮುಂಡಾಜೆ ರೋಟರಿ ಸಮುದಾಯ ದಳದ ಅಧ್ಯಕ್ಷ ವೆಂಕಟೇಶ ಭಟ್ ಕಜೆ, ವೆಂಕಟ್ರಾಯ ಅಡೂರೂ, ಶ್ರೀಧರ್ ಕೆ.ವಿ., ಯಶವಂತ ಪಟವರ್ಧನ್, ನಿವೃತ್ತ ಮೇಜರ್ ಎಂ.ವಿ. ಭಟ್, ರಾಮಕೃಷ್ಣ ಇರ್ವತ್ರಾಯ, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ತಾಲೂಕು ಗೋ ರಕ್ಷಕ ಪ್ರಮುಖ್ ದಿನೇಶ್ ಚಾರ್ಮಾಡಿ, ತೋಟತ್ತಾಡಿ ಭಜರಂಗದಳದ ಸಂಚಾಲಕ ಅವಿನಾಶ್ ಹಾಗೂ ತೋಟತ್ತಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಓಬಯ್ಯಗೌಡ ಸ್ವಾಗತಿಸಿ, ದಿವಿನೇಶ್ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಸುಧೀಶ್ ಚಾರ್ಮಾಡಿ ನಿರೂಪಿಸಿದರು