ಬೆಳ್ತಂಗಡಿ: ತುಳು ಭಾಷೆ, ನಾಡು, ನುಡಿ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ‘ತುಳುವೆರೆ ಪಕ್ಷ ಹೆಸರಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವೊಂದು ರಚನೆಯಾಗಿದ್ದು, ತುಳುಪ್ರಾಬಲ್ಯವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕಾಸರಗೋಡು ಹಾಗೂ ಮಲೆನಾಡಿನ ಗಡಿಭಾಗದ ಪ್ರದೇಶಗಳ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿರಿಸಿ ಈ ಪಕ್ಷ ರಚನೆಗೊಂಡಿದೆ.
2023ರ ವಿಧಾನ ಸಭಾ ಚುನಾವಣೆಯ ಮೇಲೆ ತುಳುವೆರೆ ಪಕ್ಷ ಕಣ್ಣಿಟ್ಟಿದ್ದು ಕರಾವಳಿಯ ಬಹುತೇಕ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಪ್ರತಿಷ್ಠಿತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ತುಳುವೆರೆ ಪಕ್ಷದ ಸಂಸ್ಥಾಪಕರಾದ ಶೈಲೇಶ್ ಆರ್.ಜೆ ಸ್ಪರ್ಧಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಹಾಗೂ ಇನ್ನುಳಿದ ಕ್ಷೇತ್ರಗಳಿಂದ ಕೂಡ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿಕೊಂಡು ತುಳುನಾಡಿನ ಸಮಗ್ರ ಅಭಿವೃದ್ಧಿಗೆ ಪೂರಕ ಹೋರಾಟಗಳನ್ನು ನಡೆಸಿದ್ದು ಪಕ್ಷದ ಚಿಹ್ನೆ ಹಾಗೂ ಕರಾವಳಿಯ ಇತರೇ ಅಭ್ಯರ್ಥಿಗಳ ಪಟ್ಟಿಯು ಜನವರಿ ಅಂತ್ಯದೊಳಗೆ ತುಳುವೆರೆ ಪಕ್ಷದಿಂದ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.
ಬೆಳ್ತಂಗಡಿಯ ವಿಧಾನ ಸಭಾ ಕ್ಷೇತ್ರದ ತುಳುವೆರೆ ಪಕ್ಷದ ಆಕಾಂಕ್ಷಿ ಶೈಲೇಶ್ ಆರ್ ಜೆ ಯಾರು?
ಮೂಲತಃ ಶಿರ್ಲಾಲು ಗ್ರಾಮದಲ್ಲಿ ಜನಿಸಿದ ಇವರು ಇಂದಬೆಟ್ಟು ಕುವೆತ್ಯಾರ್ ನಲ್ಲಿ ಬಾಲ್ಯ ಜೀವನ ದೊಂದಿಗೆ ಬೆಳ್ತಂಗಡಿಯಲ್ಲಿ ವೃತ್ತಿ ಜೀವನದ ಜೊತೆ ತುಳುನಾಡಿನ ಉಳಿವಿಗಾಗಿ ಧ್ವನಿ ಎತ್ತುತ್ತಿರುವ ಪ್ರಮುಖರು. ಬುಹುತೇಕರಿಗೆ ಚಿರಪರಿಚಿತರಾದ ಶೈಲೇಶ್ ಆರ್.ಜೆ. ವೃತ್ತಿ ಯಲ್ಲಿ ಎಂಜಿನಿಯರ್ ಆಗಿದ್ದು ಸತತ ಪ್ರಯತ್ನದ ಮೂಲಕ ತುಳುವೆರೆ ಪಕ್ಷವನ್ನು ಹುಟ್ಟುಹಾಕಿದ್ದಾರೆ. ಬಹುಸಂಖ್ಯಾತ ಬಿಲ್ಲವ ಸಮಾಜದ ಪ್ರಾಬಲ್ಯ ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಬಿಲ್ಲವ ಸಮಾಜದ ಪ್ರಬಲ ನಾಯಕರಲ್ಲಿ ಒಬ್ಬರಾದ ಇವರು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ರಂಗದಲ್ಲಿಯೂ ತೊಡಗಿಸಿಕೊಂಡು ನಿರಂತರ ಜನ ಸಂಪರ್ಕವನ್ನು ಹೊಂದಿರುವ ತುಳುನಾಡಿನ ಮುಂಚೂಣಿ ತುಳುಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ನೇತ್ರಾವತಿ ನದಿ ತಿರುವು ಎತ್ತಿನಹೊಳೆ ಯೋಜನೆಯನ್ನು ಪ್ರಥಮವಾಗಿ ವಿರೋಧಿಸಿ ತುಲುನಾಡಿಗೆ ಮಾರಕವಾದ ಯೋಜನೆ ವಿರುದ್ಧ ಸತತ ಹೋರಾಟಗಳನ್ನು ಸಂಘಟಿಸುವ ಮೂಲಕ ಕರ್ನಾಟಕ ಸರಕಾರಕ್ಕೆ ಪ್ರತಿರೋಧವನ್ನು ಒಡ್ಡಿರುವ ಪ್ರಬಲ ಹೋರಾಟಗಾರರೆಂದು ಹೆಸರುವಾಸಿಯಾಗಿರುವ ಇವರು 2013ರಲ್ಲಿ ತುಳುನಾಡು ಒಕ್ಕೂಟ ಸಂಘಟನೆಯ ಕಟ್ಟುವ ಮೂಲಕ ನಿರಂತರವಾಗಿ ತುಳು ಭಾಷೆ ತುಳು ರಾಜ್ಯ ತುಳುನಾಡಿನ ನೀರು ಸಂಸ್ಕೃತಿ ಬಗ್ಗೆ ನಿರಂತರವಾಗಿ ಹೋರಾಟಗಳನ್ನು ಸಂಘಟಿಸುತ್ತ ತುಳು ಆಸ್ಮಿತೆಯನ್ನು ಉಳಿಸುವುದಕ್ಕೆ ತುಳುನಾಡಿನಾದ್ಯಂತ ಹೋರಾಡುತ್ತಿರುವ ಶೈಲೇಶ್ ಆರ್. ಜೆ ಯವರು 2020- 21ರಲ್ಲಿ ತುಳುವೆರೆ ಪಕ್ಷ ಎನ್ನುವ ರಾಜಕೀಯ ಪಕ್ಷವನ್ನು ಕಟ್ಟುವ ಮೂಲಕ ಇವರು ಈ ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ತುಲುವೆರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.