ಬೆಳ್ತಂಗಡಿ: ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ರಾಜೇಶ್ ಪುದುಶೇರಿ ಆಯ್ಕೆ

READ ALSO

ಬೆಳ್ತಂಗಡಿ: ನೈಋತ್ಯ ರೈಲ್ವೆ ವಲಯದ ಸದಸ್ಯರಾಗಿ ಶ್ರೀ ರಾಜೇಶ್ ಪುದುಶೇರಿ ಆಯ್ಕೆಯಾಗಿದ್ದಾರೆ.ಸಾಮಾಜಿಕ, ಧಾರ್ಮಿಕ ಹಾಗೂ ಸಮಾಜ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರನ್ನು ಗುರುತಿಸಿ ರಾಜ್ಯ ಸಭಾ ಸದಸ್ಯರು ಹಾಗೂ ಇತರ ನಾಯಕರ ಶಿಫಾರಸ್ಸಿನಂತೆ ಭಾರತ ಸರ್ಕಾರವು ಶ್ರೀ ರಾಜೇಶ್ ಪುದುಶೇರಿ ಇವರನ್ನು ನೈಋತ್ಯ ರೈಲ್ವೇಯ ಡಿಆರ್‌ಯುಸಿಸಿ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸುತ್ತಾರೆ.ಇವರು ರಾಜ್ಯಾದ್ಯಂತ ಹಾಗೂ ಬೆಳ್ತಂಗಡಿ ಭಾಗದಲ್ಲಿ ನಡೆಸಿದ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಗುರುತಿಸಿ ರಾಜ್ಯಸಭಾ ಸದಸ್ಯರು ಹಾಗೂ ಇತರ ನಾಯಕರು ಶಿಫಾರಸ್ಸು ಮಾಡಿದರು. ಶ್ರೀ ರಾಜೇಶ್ ಪುದುಶೇರಿ ಇವರು ಬೆಂಗಳೂರು ರೈಲ್ವೆಯ ಕಚೇರಿಯಲ್ಲಿ ದಿನಾಂಕ ಮೇ 22ರಂದು ಅಧಿಕಾರ ವಹಿಸಿಕೊಂಡರು.