ಸೋಮಂತಡ್ಕ ಬಿ.ಎಂ ಸುಪರ್ ಮಾರ್ಕೆಟ್ ನಲ್ಲಿ ಅಗ್ನಿ ಅವಘಡ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಸೋಮಂತಡ್ಕದ ದಿಡುಪೆ ರಸ್ತೆಯ ಬಿ ಎಂ ಹಂಝ ಎಂಬವರ ಮಾಲಕತ್ವದ ಸೂಪರ್ ಮಾರ್ಕೆಟ್ ನಲ್ಲಿ ಭಾನುವಾರ ಮುಂಜಾನೆ ವೇಳೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ.

ಈ ಘಟನೆ ಪತ್ರಿಕಾ ವಿತರಣೆ ಮಾಡುವವರ ಗಮನಕ್ಕೆ ಬಂದು ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದ್ದಾರೆ.

READ ALSO

ಸ್ಥಳೀಯರ ಸಹಕಾರ ಹಾಗೂ ಅಗ್ನಿಶಾಮಕದಳ ಸಕಾಲದಲ್ಲಿ ಸ್ಪಂದಿಸಿದೆ. ಆದರೆ ಬೆಂಕಿ ಸಂಪೂರ್ಣ ತಗುಲಿದ್ದರಿಂದ ಮಾಲಕರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ.