ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ನನ್ನ ಬಳಿ ದುಡ್ಡಿಲ್ಲ ಎಂದು ಸಬೂಬು ಹೇಳುತ್ತಿದ್ದವರಿಗೆ ಶಾಕ್ ಕೊಟ್ಟ ಪೋಲಿಸ್ ಇಲಾಖೆ! ಇನ್ಮುಂದೆ ಆನ್ ಲೈನ್ ಮೂಲಕವು ದಂಡ ಪಾವತಿಸಬಹುದು

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಮೇಲೆ ದಂಡ ಕಟ್ಟಿಸಿಕೊಳ್ಳುವ ಪೊಲೀಸರು ಹಾಗೂ ಸವಾರರ ನಡುವೆ ವಾಗ್ಯುದ್ದಗಳೇ ನಡೆದು ಹೋಗಿವೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದರು ನನ್ನ ಬಳಿ ದುಡ್ಡಿಲ್ಲ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಆಗುವುದೇ ಇಲ್ಲ. ಬೆಂಗಳೂರು ನಗರ ಸಂಚಾರಿ ಪೊಲೀಸ್​ ವಿಭಾಗ ಈಗ ಸ್ಮಾರ್ಟ್​ ಆಗುವತ್ತ ಹೆಜ್ಜೆ ಇಟ್ಟಿದೆ. ಸಂಚಾರ ನಿಯಮ ಉಲ್ಲಂಘನೆಗಳ ದಂಡ ಪಾವತಿಗೆ ಎಂದು ಪೇಟಿಎಂ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಇಂದು ಕಮಿಷನರ್​ ಕಮಲ್​ ಪಂತ್ ಅವರು ಈ ಸೌಲಭ್ಯವನ್ನು ಉದ್ಘಾಟನೆ ಮಾಡಿದರು. ಇದುವರೆಗು ಡಿಜಿಟಲ್​ ವೇದಿಕೆಯ ಮೂಲಕ ದಂಡ ಪಾವತಿಸಲು ಅವಕಾಶ ಇರಲಿಲ್ಲ. ಈಗ ಪೇಟಿಎಂ ಸೌಲಭ್ಯ ಈ ಕೊರತೆ ನೀಗಿಸಿದೆ. ಈ ಮೊದಲು E-Challan – Digital Traffic/Transport Enforcement Solution ವೆಬ್​ಸೈಟ್​ಗೆ ಭೇಟಿ ನೀಡಿ ನಂತರ ‘ಗೆಟ್​ ಚಲನ್​ ಡೀಟೈಲ್ಸ್’​ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ ‘ಚಲನ್ ನಂಬರ್​’, ‘ವೆಹಿಕಲ್​ ನಂಬರ್​’, ‘ಡಿಎಲ್​ ನಂಬರ್’ ನಮೂದಿಸಿದ ನಂತರ ಪರಿಶೀಲಿಸಿ ಆನ್​ಲೈನ್​ನಲ್ಲಿ ​ ಪಾವತಿ ಆಯ್ಕೆಯನ್ನು ಕ್ಲಿಕ್​ ಮಾಡಿ ಓಟಿಪಿ ನಮೂದಿಸಿ ಇ-ಚಲನ್​ ಮೂಲಕ ಪಾವತಿ ಮಾಡುವ ಅವಕಾಶವಿತ್ತು.

READ ALSO

ಅಲ್ಲದೇ ಡಿಜಿಟಲ್ ರೂಪದಲ್ಲಿ ಪಾವತಿ ಮಾಡಲು ಬೆಂಗಳೂರು ಓನ್
ವೆಬ್ ಸೈಟ್ ,ಪಿಡಿಎ ಮೆಷಿನ್ ಗಳಲ್ಲಿ ಸೌಲಭ್ಯವಿತ್ತು. ಇದು ದಂಡ ಕಟ್ಟದೆ ಅನೇಕರು ಓಡಾಡುವುದಕ್ಕೆ ದಾರಿ ಮಾಡಿಕೊಟ್ಟಿತ್ತಲ್ಲದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ಮೇಲೆ ದಂಡ ವಸೂಲಾತಿಯೇ ತಲೆ ನೋವಾಗಿ ಸಂಚಾರಿ ಪೊಲೀಸರಿಗೆ ಪರಿಣಮಿಸಿತ್ತು. ಆದರೆ ಈಗ ಈ ಎಲ್ಲಾ ರೀತಿಯ ಗೊಡವೆಗಳಿಗೆ ಪೊಲೀಸ್​ ಇಲಾಖೆ ಗುಡ್​ ಬೈ ಹೇಳಿದೆ.

ಈಗಂತೂ ಹೆಚ್ಚಿನವರ ಬಳಿ ಸ್ಮಾರ್ಟ್​ ಫೋನ್​ ಇದ್ದೆ ಇರುತ್ತದೆ, ಸ್ಮಾರ್ಟ್​ ಫೋನ್​ ಇದ್ದವರ ಬಳಿ ಪೇಟಿಎಂ ಅಥವಾ ಇತರೆ ಡಿಜಿಟಲ್​ ಪೇಮೆಂಟ್ ಆಯಪ್​ಗಳು ಇದ್ದೇಇರುತ್ತವೆ. ಈ ಅಂಶವನ್ನೇ ಗಮನದಲ್ಲಿ ಇಟ್ಟುಕೊಂಡು ಹೊಸಾ ತಂತ್ರಜ್ಣಾನದ ಮೊರೆ ಹೋಗಿದ್ದು, ನೀವೇನಾದರೂ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ, ನಿಮ್ಮ ಬಳಿ ಪೇಟಿಎಂ ಪೇಮೆಂಟ್​ ಆಯಪ್​ ಇದ್ದರೆ ದಂಡ ಪಾವತಿ ಬಗ್ಗೆ ನೋಟಿಫಿಕೇಶನ್​ ಬರುತ್ತದೆ. ಆ ನೋಟಿಫಿಕೇಶನ್​ ಒತ್ತಿ ದಂಡ ಪಾವತಿಸಬಹುದು. ಟೆಲಿಬ್ರಹ್ಮ ಸಾಫ್ಟ್ ವೇರ್ ಸರ್ವೀಸಸ್ ಸಹಯೋಗದೊಂದಿಗೆ ಸರ್ವೀಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಈ ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ.

ಸಂಚಾರಿ ನಿಯಮ ಉಲ್ಲಂಘನೆಯಾದ ಮೇಲೆ ದಂಡ ಪಾವತಿಯ ವೇಳೆ ಪೊಲೀಸ್​ ಹಾಗೂ ಸಾರ್ವಜನಿಕರ ನಡುವೆ ಸಾಕಷ್ಟು ವಾಗ್ಯುದ್ದಗಳೇ ನಡೆದು ಹೋಗುತ್ತಿದ್ದವು. ಈಗ ನಗದು ರಹಿತವಾಗಿ ದಂಡ ಪಾವತಿಸಲು ಹೊಸ ಮಾರ್ಗ ಇದಾಗಿದ್ದು ಇನ್ನಾದರೂ ದಂಡ ಪಾವತಿ ವೇಳೆ ಅನವಶ್ಯಕ ಸಮಯ ವ್ಯರ್ಥವಾಗುವುದು, ಜಗಳಗಳಾಗುವುದು ಹೀಗೆ ಅನೇಕ ತಲೆ ನೋವುಗಳು ಇಲ್ಲವಾಗಿದ್ದು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆಯೋ ತಿಳಿದಿಲ್ಲ. ಆದರೆ ಪೊಲೀಸರ ಕೆಲಸವಂತೂ ಈಗ ಸುಲಭವಾಗಿದೆ.