ದೇರಾಜೆಬೆಟ್ಟ ದೈವ–ಕೊಡಮಣಿತ್ತಾಯ ಕ್ಷೇತ್ರ: ಜುಲೈ 07 ರಂದು ಶಿಲಾನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ಮರೋಡಿ ಗ್ರಾಮದ ದೇರಾಜೆಬೆಟ್ಟ ದೈವ ಕೊಡಮಣಿತ್ತಾಯ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಇದೇ 7ರಂದುಬ ಬುಧವಾರ ಬೆಳಿಗ್ಗೆ 10.10ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಶಿಲ್ಯಾನ್ಯಾಸ ನೆರವೇರಿಸಲಿರುವರು. ವೇದಮೂರ್ತಿ ಕೆ. ಅನಂತ ಅಸ್ರಣ್ಣ ಕೇಳ ಬೊಟ್ಟ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.

READ ALSO

2022 ಜನವರಿಯೊಳಗೆ ಜೀರ್ಣೋದ್ಧಾರ:

ಪೊಸರಡ್ಕ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ದೇರಾಜೆ ಗುಡ್ಡೆ ಕ್ಷೇತ್ರದಲ್ಲಿ ಈಚೆಗೆ ಗಣಹೋಮ ಸಹಿತ ವಿವಿಧ ಉಚ್ಚಾಟನಾ ಕಾರ್ಯಗಳು ನಡೆಯಿತು. ಅದರಂತೆ ಪ್ರಶ್ನೆ ಚಿಂತನೆಯ ಅನುಸಾರವಾಗಿ ದೇರಾಜೆ ಗುಡ್ಡೆಯಲ್ಲಿ ದೈವ ಹಾಗೂ ಕೊಡಮಣಿತ್ತಾಯ ಸಾನ್ನಿಧ್ಯವಿದ್ದು ಅದರ ಜೀರ್ಣೋದ್ಧಾರ ಕಾರ್ಯಕ್ರಮ ಪ್ರಥಮವಾಗಿ ನಡೆಯಬೇಕೆಂದು ತಿಳಿದು ಬಂದಿದೆ.

ದೇರಾಜೆ ಕ್ಷೇತ್ರದಲ್ಲಿ ಪ್ರತೀ 5 ವರ್ಷಕೊಮ್ಮೆ ದೈವ ಕೊಡಮಣಿತ್ತಾಯ ನೇಮೋತ್ಸವ ನಡೆಸಲು ಈ ಸಂದರ್ಭ ತೀರ್ಮಾನಿಸಲಾಗಿದೆ. ಆ ಪ್ರಯುಕ್ತ ಪ್ರಥಮವಾಗಿ ದೇರಾಜೆ ಕ್ಷೇತ್ರದಲ್ಲಿ ಜೀರ್ಣೋದ್ಧಾರಾದಿ ಬ್ರಹ್ಮಕಲಶೋತ್ಸವದ ಕಾರ್ಯಗಳು ನಡೆಯಲಿವೆ. 2022 ಜನವರಿ ಒಳಗೆ ದೇರಾಜೆ ಕ್ಷೇತ್ರದ ಜೀರ್ಣೋದ್ಧಾರ ಸಂಪೂರ್ಣವಾದ ಬಳಿಕ ಪೊಸರಡ್ಕ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ರಮಗಳು ನಡೆಸುವುದಾಗಿ ನಿಶ್ಚಯಿಸಲಾಗಿದೆ.

ದೇರಾಜೆ ಗುಡ್ಡೆಯಲ್ಲಿ ಈಚೆಗೆ ಸರ್ಪ ಸಂಸ್ಕಾರ, ಭೂ ವರಾಹ, ದರ್ಶನ ಹೋಮ ಈತ್ತೀಚೆಗೆ ನಡೆಯಿತು. ಗುರಿಕಾರರು, ಊರ ಹತ್ತು ಸಮಸ್ತರು ಭಾಗವಹಿಸಿದ್ದರು.