ಶೃಂಗೇರಿ ಮರುಮತ ಏಣಿಯ ಬಳಿಕ ಸುಪ್ರೀಂ ಮೊರೆ ಹೋದ ಮಾಜಿ ಶಾಸಕ ಟಿ.ಡಿ.ರಾಜೇಗೌಡ

ಹೊಸದಿಲ್ಲಿ: ಮರು ಮತ ಎಣಿಕೆ ಬಳಿಕ ತಮ್ಮ ಶಾಸಕ ಸ್ಥಾನ ರದ್ದಾಗಿರುವುದನ್ನು ಪ್ರಶ್ನಿಸಿ ಶೃಂಗೇರಿಯ ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದೆದುರು ಈ ವಿಷಯವನ್ನು ಹಿರಿಯ ವಕೀಲ ದೇವದಾಸ್ ಕಾಮತ್ ಪ್ರಸ್ತಾಪಿಸಿದರು. “ಇದು ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದ್ದು ಹಾಲಿ ಶಾಸಕರ ಶಾಸಕತ್ವವನ್ನು ರದ್ದುಗೊಳಿಸಲಾಗಿದೆ” ಎಂದು ಅವರು ನ್ಯಾಯಪೀಠದ ಗಮನಕ್ಕೆ ತಂದರು.ಮೇ 11ರಂದು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಪೀಠ ಒಪ್ಪಿಗೆ ಸೂಚಿಸಿತು.

2023ರಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಕರ್ನಾಟಕ ಹೈಕೊರ್ಟ್ ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

279 ತಿರಸ್ಕೃತ ಮತಗಳು ಸೇರಿದಂತೆ ಎಲ್ಲ ಮತಗಳ ಮರು ಎಣಿಕೆ ನಡೆಸುವಂತೆ ಎಪ್ರಿಲ್ 6ರಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಮೇ 3, 2026ರಂದು ಪರಿಷ್ಕೃತ ಫಲಿತಾಂಶವನ್ನು ಚುನಾವಣಾಧಿಕಾರಿ ಅಧಿಕೃತವಾಗಿ ಪ್ರಕಟಿಸಿದ್ದರು.

ಈ ಪರಿಷ್ಕೃತ ಫಲಿತಾಂಶದಲ್ಲಿ ರಾಜೇಗೌಡರ ಒಟ್ಟು ಮತಗಳ ಸಂಖ್ಯೆ 255ರಷ್ಟು ಕಡಿತಗೊಂಡು, ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

Spread the love
  • Related Posts

    ಬೆಳ್ತಂಗಡಿ ದೈಹಿಕ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ಅಖಿಲ್ ಕುಮಾರ್ ವಿಧಿವಶ

    ಬೆಳ್ತಂಗಡಿ: ಬೆಳ್ತಂಗಡಿ ಪಿ.ಎಂ.ಶ್ರೀ ಮಾದರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ಅಖಿಲ್ ಕುಮಾರ್ (50ವ) ಅವರು ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜೂ 12ರಂದು ನಿಧನರಾದರು. ಒರ್ವ ಅದ್ಭುತ ಕಬಡ್ಡಿ ತೀರ್ಪುಗಾರರಾಗಿ, ತರಬೇತುದಾರರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ…

    Spread the love

    ಮುಖ್ಯಮಂತ್ರಿ ಡಿಕೆಶಿ ಯವರಿಂದ ಪ್ರಧಾನಮಂತ್ರಿ ಭೇಟಿ, ರಾಜ್ಯದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ

    ನವದೆಹಲಿ: ನವದಹೆಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ…

    Spread the love

    You Missed

    ಬೆಳ್ತಂಗಡಿ ದೈಹಿಕ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ಅಖಿಲ್ ಕುಮಾರ್ ವಿಧಿವಶ

    • By admin
    • June 12, 2026
    • 73 views
    ಬೆಳ್ತಂಗಡಿ ದೈಹಿಕ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ,  ಅಖಿಲ್ ಕುಮಾರ್ ವಿಧಿವಶ

    ಮುಖ್ಯಮಂತ್ರಿ ಡಿಕೆಶಿ ಯವರಿಂದ ಪ್ರಧಾನಮಂತ್ರಿ ಭೇಟಿ, ರಾಜ್ಯದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ

    • By admin
    • June 11, 2026
    • 34 views
    ಮುಖ್ಯಮಂತ್ರಿ ಡಿಕೆಶಿ ಯವರಿಂದ ಪ್ರಧಾನಮಂತ್ರಿ ಭೇಟಿ, ರಾಜ್ಯದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ

    ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ – ಪ್ರವಾಸಿಗರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆ

    • By admin
    • June 10, 2026
    • 51 views
    ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ – ಪ್ರವಾಸಿಗರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆ

    ಉಜಿರೆ – ಗುರಿಪಳ್ಳ ಸಂಪರ್ಕ ರಸ್ತೆ ಅಂಬಡೆಬೆಟ್ಟುವಿನಲ್ಲಿ ತಾತ್ಕಾಲಿಕ ರಸ್ತೆ ಸಂಪೂರ್ಣ ಕುಸಿತ ಸಂಚಾರ ಬಂದ್ ಜನಜೀವನ ಅಸ್ತವ್ಯಸ್ತ

    • By admin
    • June 9, 2026
    • 100 views
    ಉಜಿರೆ – ಗುರಿಪಳ್ಳ ಸಂಪರ್ಕ ರಸ್ತೆ ಅಂಬಡೆಬೆಟ್ಟುವಿನಲ್ಲಿ  ತಾತ್ಕಾಲಿಕ ರಸ್ತೆ ಸಂಪೂರ್ಣ ಕುಸಿತ ಸಂಚಾರ ಬಂದ್ ಜನಜೀವನ ಅಸ್ತವ್ಯಸ್ತ

    ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

    • By admin
    • June 9, 2026
    • 44 views
    ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

    “ಭಜನೆಯಿಂದ ಸಂಸ್ಕಾರ ವೃದ್ಧಿಯಾಗಿ, ಸಮಾಜಸೇವೆಯ ಮನೋಭಾವ ಬೆಳೆಯಲಿ; ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ” : ಶಾಸಕ ಹರೀಶ್ ಪೂಂಜಾ

    • By admin
    • June 7, 2026
    • 195 views