ನೀವು SSLC (10ನೇ ತರಗತಿ) ವಿದ್ಯಾರ್ಥಿಗಳಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣಾವಕಾಶ!

ಪರೀಕ್ಷಾ ಸಿದ್ಧತೆ, ಆತ್ಮವಿಶ್ವಾಸ ವೃದ್ಧಿ ಹಾಗೂ ಮುಂದಿನ ಶೈಕ್ಷಣಿಕ ಆಯ್ಕೆಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ

ಬೆಳ್ತಂಗಡಿ: ಎಕ್ಸೆಲ್ ಪಿಯು ಕಾಲೇಜಿನ ವತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ‘10 PLUS’ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ನವೆಂಬರ್ 29ರ ಭಾನುವಾರ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವುದು, ಉತ್ತಮ ಅಂಕ ಗಳಿಸುವ ತಂತ್ರಗಳು, ಸಮಯ ನಿರ್ವಹಣೆ ಹಾಗೂ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.

ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು NEET, NDA, JEE-IIT ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಚಯ ಹಾಗೂ ಪಿಯುಸಿ ನಂತರದ ಶೈಕ್ಷಣಿಕ ಅವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಪ್ರೊ. ಬಿ.ವಿ. ಸೂರ್ಯನಾರಾಯಣ, ಸ್ಮಿತೇಶ್ ಎಸ್. ಬಾರ್ಯ ಹಾಗೂ ಶ್ರೀಮತಿ ಚೈತ್ರ ಎಸ್. ಪೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಡಾ. ನವೀನ್ ಕುಮಾರ್ ಮರಿಕೆ ಹಾಗೂ ಡಾ. ಪ್ರಜ್ವಲ್ ಕಜೆ ಅವರು ಶೈಕ್ಷಣಿಕ ಮಾರ್ಗದರ್ಶನ ನೀಡಲಿದ್ದಾರೆ.ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಾಗೂ ಮಕ್ಕಳ ಭವಿಷ್ಯದ ಆಯ್ಕೆಗಳ ಬಗ್ಗೆಯೂ ಕಾರ್ಯಾಗಾರದಲ್ಲಿ ವಿಶೇಷ ಮಾಹಿತಿ ನೀಡಲಾಗುತ್ತದೆ.

10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 8618286425 / 6364156449

www.kalanirnayanews.com

Spread the love
  • Related Posts

    ಶುಭ ಸಮಾರಂಭಗಳಿಗೆ ರುಚಿಕರ ಭೋಜನದ ಸವಿರುಚಿ – ದಿಶಾನ್ ಕ್ಯಾಟರರ್ಸ್

    ಬೆಳ್ತಂಗಡಿ: ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಅತಿಥಿಗಳಿಗೆ ರುಚಿಕರ ಹಾಗೂ ಗುಣಮಟ್ಟದ ಭೋಜನ ಒದಗಿಸುವುದು ಪ್ರತಿಯೊಂದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಈ ನಿಟ್ಟಿನಲ್ಲಿ ದಿಶಾನ್ ಕ್ಯಾಟರರ್ಸ್ (Dishan Caterers) ಉತ್ತಮ ಆಹಾರ ಸೇವೆಯೊಂದಿಗೆ ಗ್ರಾಹಕರಿಗೆ ಆತ್ಮೀಯ ಆತಿಥ್ಯ…

    Spread the love

    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಪ್ರಮುಖ ಹುದ್ದೆಗಳಿಗೆ 100ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ

    ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಎಕ್ಸೆಲ್ ಪಿಯು ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಲೇಜಿನಲ್ಲಿ ಸ್ಟೂಡೆಂಟ್ ವೆಲ್ಫೇರ್ ಆಫೀಸರ್ (Student Welfare Officer) ಹಾಗೂ ಪುರುಷ ಮತ್ತು ಮಹಿಳಾ ವಾರ್ಡನ್ (Male & Female Wardens) ಸೆಕ್ಯೂರಿಟಿ…

    Spread the love

    You Missed

    ನೀವು SSLC (10ನೇ ತರಗತಿ) ವಿದ್ಯಾರ್ಥಿಗಳಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣಾವಕಾಶ!

    • By admin
    • November 24, 2026
    • 4 views
    ನೀವು SSLC (10ನೇ ತರಗತಿ) ವಿದ್ಯಾರ್ಥಿಗಳಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣಾವಕಾಶ!

    ಶುಭ ಸಮಾರಂಭಗಳಿಗೆ ರುಚಿಕರ ಭೋಜನದ ಸವಿರುಚಿ – ದಿಶಾನ್ ಕ್ಯಾಟರರ್ಸ್

    • By admin
    • November 21, 2026
    • 8 views
    ಶುಭ ಸಮಾರಂಭಗಳಿಗೆ ರುಚಿಕರ ಭೋಜನದ ಸವಿರುಚಿ –  ದಿಶಾನ್ ಕ್ಯಾಟರರ್ಸ್

    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಪ್ರಮುಖ ಹುದ್ದೆಗಳಿಗೆ 100ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ

    • By admin
    • November 21, 2026
    • 9 views
    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಪ್ರಮುಖ ಹುದ್ದೆಗಳಿಗೆ 100ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ

    ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಓ ಆಗಿ ಉದಯಕುಮಾರ್ ಹೆಬ್ಬಾರ್ ನೇಮಕ

    • By admin
    • November 19, 2026
    • 10 views
    ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಓ ಆಗಿ ಉದಯಕುಮಾರ್ ಹೆಬ್ಬಾರ್ ನೇಮಕ

    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಹಾಗೂ ವಾರ್ಡನ್ ಹುದ್ದೆಗಳಿಗೆ ನೇಮಕಾತಿ

    • By admin
    • November 17, 2026
    • 15 views
    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಹಾಗೂ ವಾರ್ಡನ್ ಹುದ್ದೆಗಳಿಗೆ ನೇಮಕಾತಿ

    ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮನೋಹರ್ ಬಳಂಜರಿಗೆ ಸನ್ಮಾನ

    • By admin
    • November 16, 2026
    • 11 views
    ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮನೋಹರ್ ಬಳಂಜರಿಗೆ ಸನ್ಮಾನ