ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಆನೆಗಳು ಭಯಭೀತರಾಗಿ ವಾಹನಗಳನ್ನು ಹಿಮ್ಮುಖವಾಗಿ ಚಲಿಸಿದ ಸವಾರರು

ಹಾಸನ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಡಾನೆಗಳು ಬೆಳ್ಳಂಬೆಳಗ್ಗೆ ಸಾಗುತ್ತಿದ್ದುದನ್ನು ಕಂಡು ಭಯಭೀತರಾಗಿ ವಾಹನಗಳನ್ನು ಹಿಮ್ಮುಖವಾಗಿ ಚಲಿಸಿದ ಘಟನೆ ಸಕಲೇಶಪುರದ ಅಲಗಳಲೆ ಕ್ರಾಸ್ ಬಳಿ ನಡೆದಿದೆ.

ಈ ಪ್ರದೇಶವು ಅರಣ್ಯ ಪ್ರದೇಶ ಗಳಿಗೆ ಸನಿಹದಲ್ಲಿದ್ದು ಸಾಮಾನ್ಯವಾಗಿ ಕಾಡಾನೆಗಳು ಈ ಪರಿಸರದಲ್ಲಿ ಓಡಾಡುತ್ತಿದ್ದು ಇಂದು ತಾಯಾನೆ ಮತ್ತು 2ಮರಿಯಾನೆಗಳು ರಸ್ತೆಗೆ ಇಳಿದಿದ್ದು ರಸ್ತೆ ಮೂಲಕವೇ ಸಂಚಾರ ಮಾಡಿದ್ದು ಇದರಿಂದ ವಾಹನ ಸವಾರರು ಭಯಭೀತರಾಗಿದ್ದಾರೆ.

READ ALSO