ಬಿಪಿಎಲ್ ಕಾರ್ಡ್​ದಾರರಿಗೆ ನೀಡುವ ಅಕ್ಕಿಯ ಪ್ರಮಾಣ 5ರಿಂದ 10 ಕೆ.ಜಿಗೆ ಹೆಚ್ಚಳ

ಬೆಂಗಳೂರು: ಬಿಪಿಎಲ್​​ ಕಾರ್ಡ್​​ದಾರರಿಗೆ ನೀಡುವ ಅಕ್ಕಿಯನ್ನು 5ರಿಂದ 10 ಕೆ.ಜಿಗೆ ಹೆಚ್ಚಿಸಲು ಆಹಾರ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಪರಿಶೀಲನೆ ‌ಹಂತದಲ್ಲಿದ್ದಲ್ಲಿ ಇರುವವರಿಗೂ ಮೇ, ಜೂನ್ ತಿಂಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಕೆಜಿಗೆ ₹15ರಂತೆ 10 ಕೆಜಿ ಅಕ್ಕಿಯನ್ನು ಎಪಿಎಲ್ ಅರ್ಜಿದಾರರಿಗೂ ಈ ಅವಧಿಯಲ್ಲಿ ಆಹಾರ ಇಲಾಖೆ ವಿತರಣೆ ಮಾಡಲಿದೆ. ಈ ಕುರಿತು ಆಹಾರ ಸಚಿವ ಉಮೇಶ್ ಕತ್ತಿ ಪ್ರಕಟಣೆ ಹೊರಡಿಸಿದ್ದಾರೆ. 

ಅಷ್ಟೇ ಅಲ್ಲದೇ, ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಕಾರ್ಡ್​​ದಾರರಿಗೆ 35 ಕೆಜಿ ಧಾನ್ಯದ ಜತೆಗೆ  5 ಕೆಜಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಎಪಿಎಲ್ ಕಾರ್ಡ್​​ದಾರರಿಗೆ ಕೆಜಿಗೆ 15 ರೂ.‌ನಂತೆ ಅಕ್ಕಿ, ರಾಜ್ಯದಿಂದ ನೀಡಲಾಗುತ್ತಿರುವ 5 ಕೆಜಿ ಧಾನ್ಯದ ಜತೆಗೆ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಿಎಂಜಿಕೆವೈ ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ತಿಂಗಳಿಗೆ ರಾಜ್ಯದಿಂದ ನೀಡಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 10 ಕೆಜಿ ಆಹಾರ ಧಾನ್ಯ ನೀಡುವುದಾಗಿ ತಿಳಿಸಲಾಗಿದೆ.

ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಚೀಟಿಗೆ 25 ಕಿಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ವಿತರಿಸಲು ಆಹಾರ ಸಚಿವ ಉಮೇಶ್ ಕತ್ತಿ ಆದೇಶಿಸಿದ್ದಾರೆ. ಈ ಮೂಲಕ ಕೊವಿಡ್ ಮತ್ತು ಲಾಕ್​ಡೌನ್​ನಿಂದ ತೊಂದರೆಗೆ ಒಳಗಾದವರಿಗೆ ಸದ್ಯ ನೇರವಾಗಿ ವಿಶೇಷ ಪ್ಯಾಕೇಜ್ ಘೋಷಿಸದೆ ಪಡಿತರ ಹೆಚ್ಚಳ ಮಾಡಲಾಗಿದೆ.

Spread the love
  • Related Posts

    ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಕಾಡಿನಿಂದ ಅಕ್ರಮವಾಗಿ ಮರ ಕಡಿದು ದಾಸ್ತಾನು: ನಾವೂರು ನಿವಾಸಿ ಪ್ರಮೋದ್ ಸಾಲ್ಯಾನ್ ವಿರುದ್ದ ಪ್ರಕರಣ ದಾಖಲು

    ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗಕ್ಕೆ ಸೇರಿದ ಕಾಡಿನಿಂದ ಅಕ್ರಮವಾಗಿ ಮರ ಕಡಿದು ದಾಸ್ತಾನು ಮಾಡಿದ್ದ ಪ್ರಕರಣವನ್ನು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೊರ್ತಾಜೆ ನಿವಾಸಿ…

    Spread the love

    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    ನವದೆಹಲಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಾಲಿ ರಾಜ್ಯಪಾಲರಾಗಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿಯು ತೆರೆಕಂಡಿದ್ದು, ರಾಜ್ಯ ರಾಜಭವನಕ್ಕೆ ಹೊಸ ಮುಖ್ಯಸ್ಥರ ಆಗಮನವಾಗಲಿದೆ. ಕರ್ನಾಟಕ ಸೇರಿದಂತೆ…

    Spread the love

    You Missed

    ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಕಾಡಿನಿಂದ ಅಕ್ರಮವಾಗಿ ಮರ ಕಡಿದು ದಾಸ್ತಾನು: ನಾವೂರು ನಿವಾಸಿ ಪ್ರಮೋದ್ ಸಾಲ್ಯಾನ್ ವಿರುದ್ದ ಪ್ರಕರಣ ದಾಖಲು

    • By admin
    • October 15, 2026
    • 2 views
    ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಕಾಡಿನಿಂದ ಅಕ್ರಮವಾಗಿ ಮರ ಕಡಿದು ದಾಸ್ತಾನು:   ನಾವೂರು ನಿವಾಸಿ ಪ್ರಮೋದ್ ಸಾಲ್ಯಾನ್ ವಿರುದ್ದ ಪ್ರಕರಣ ದಾಖಲು

    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    • By admin
    • October 12, 2026
    • 5 views
    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    ಸೌದಿ ಅರೇಬಿಯಾ ಏರ್ ಪೋರ್ಟ್‌ ಮೇಲೆ ಹೌತಿ ಉಗ್ರರ ದಾಳಿ – 12 ಮಂದಿ ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ!

    • By admin
    • October 11, 2026
    • 5 views
    ಸೌದಿ ಅರೇಬಿಯಾ ಏರ್ ಪೋರ್ಟ್‌ ಮೇಲೆ ಹೌತಿ ಉಗ್ರರ ದಾಳಿ – 12 ಮಂದಿ ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ!

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ “ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ” – ಇಲಾಬೆನ್ ಸ್ಮಾರಕ ಪ್ರಶಸ್ತಿ’

    • By admin
    • October 10, 2026
    • 7 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ “ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ” – ಇಲಾಬೆನ್ ಸ್ಮಾರಕ ಪ್ರಶಸ್ತಿ’

    ಕಾಡಾನೆ ಸಂಚಾರ ಹಿನ್ನಲೆ ದಿಡುಪೆ ಫಾಲ್ಸ್ ಭೇಟಿಗೆ ನಿರ್ಬಂಧ

    • By admin
    • October 9, 2026
    • 10 views
    ಕಾಡಾನೆ ಸಂಚಾರ ಹಿನ್ನಲೆ ದಿಡುಪೆ ಫಾಲ್ಸ್ ಭೇಟಿಗೆ ನಿರ್ಬಂಧ

    ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ

    • By admin
    • October 9, 2026
    • 11 views
    ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ